ಮುಂಬೈ: ಹಿಂದಿ ಕಿರುತೆರೆ ಮತ್ತು ಬಿಗ್ಬಾಸ್ ಒಟಿಟಿ ಖ್ಯಾತಿಯ ನಟಿ ಉರ್ಫಿ ಜಾವೇದ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಉರ್ಫಿ ಹಲವಾರು ವಿನ್ಯಾಸದ ಡ್ರೆಸ್ ಧರಿಸಿ ಫೋಟೋ ವಿಡಿಯೋ ಮಾಡಿ ಶೇರ್ ಮಾಡುತ್ತಲೇ ಇರುತ್ತಿದ್ದ ಇನ್ಸ್ಟಾಗ್ರಾಮ್ ಖಾತೆ ಇದೀಗಾ ಏಕಾಏಕಿ ಸಸ್ಪೆಂಡ್ ಆಗಿದ್ದು, ಈ ವಿಚಾರ ಎಲ್ಲೆಡೆ ವೈರಲ್ ಆಗಿದೆ.
ಈ ಹಿಂದೆಯು ಅಸಾಂಪ್ರದಾಯಿಕ ಡ್ರೆಸ್ಸಿಂಗ್ ಸೆನ್ಸ್ನಿಂದಾಗಿ ಯಾವಾಗಲು ವಿವಾದದಲ್ಲಿರುವ ನಟಿ ಉರ್ಫಿ ಜಾವೇದ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಲೇ ತಮ್ಮ ಫಾಲೋವರ್ಸ್ ಸಂಖ್ಯೆ ಹೆಚ್ಚಿಕೊಳ್ಳುತ್ತಿದ್ದರು. ಆದರೆ ಇದೀಗಾ ಸಸ್ಪೆಂಡ್ ಆಗಿರುವ ಕುರಿತು ಇನ್ಸ್ಟಾಗ್ರಾಮ್ ನಟಿಗೆ ಸಂದೇಶ ರವಾನಿಸಿದ್ದು, ಉರ್ಫಿ ಇನ್ಸ್ಟಾಗ್ರಾಮ್ ಕಳಿಸಿರುವ ಮೆಸೇಜ್ ಒಂದರ ಸ್ಕ್ರೀನ್ಶಾಟ್ ಅನ್ನು ತನ್ನ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ಈ ಪೋಸ್ಟ್ಗೆ ಸಕತ್ ಶೀರ್ಷಿಕೆ ಕೊಟ್ಟು ತನ್ನನ್ನು ದ್ವೇಷಿಸುವವರನ್ನು ನಟಿ ವ್ಯಂಗ್ಯವಾಡಿದ್ದಾರೆ.
ಇನ್ನು ಇನ್ಸ್ಟಾಗ್ರಾಮ್ ಕಳಿಸಿರುವ ಸಂದೇಶದಲ್ಲಿ ನಾವು ನಿಮ್ಮ ಖಾತೆ ಸಸ್ಪೆಂಡ್ ಮಾಡುತ್ತೇವೆ. ನಿಮ್ಮ ಖಾತೆ ಜನರಿಗೆ ಕಾಣುವುದಿಲ್ಲ. ಈ ಕ್ಷಣ ನೀವು ಖಾತೆ ಬಳಸಲು ಸಾಧ್ಯವಿಲ್ಲ ಎಂದು ಬರೆಯಲಾಗಿದೆ. ಜೊತೆಗೆ ಅದೇ ರೀತಿ ಇನ್ಸ್ಟಾಗ್ರಾಮ್ನ ಈ ನಿರ್ಧಾರವನ್ನು 180 ದಿನದಲ್ಲಿ ನೀವು ಪ್ರಶ್ನೆ ಮಾಡಬಹುದು. ಇಲ್ಲವಾದರೆ ನಿಮ್ಮ ಖಾತೆ ಶಾಶ್ವತವಾಗಿ ಬ್ಲಾಕ್ ಆಗುತ್ತದೆ ಎಂದು ಇನ್ಸ್ಟಾಗ್ರಾಮ್ ಹೇಳಿದೆ ಎಂದು ತಿಳಿದು ಬಂದಿದೆ.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವುದಕ್ಕೆ ಅದರದ್ದೇ ಆದ ನಿಯಮಗಳಿವೆ. ಆದರೆ, ಉರ್ಫಿ ಜಾವೇದ್ ಅವರು, ತಮ್ಮ ಖಾತೆಯಲ್ಲಿ ಸಕತ್ ಬೋಲ್ಡ್ ಆಗಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಆದರೆ, ಇದೇ ಕಾರಣಕ್ಕೆ ಅವರ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೇ ಎಂದು ಸ್ಫಷ್ಟ ಕಾರಣಗಳು ತಿಳಿದು ಬಂದಿಲ್ಲ