ಬೆಂಗಳೂರು : ನಟ ದರ್ಶನ್ ಬಳಿಯಿದ್ದ ವಿದೇಶಿ ಕಂಪನಿ ಗನ್ಅನ್ನು ಆರ್ ಆರ್ ನಗರ ಪೊಲೀಸರು ಸೀಜ್ ಮಾಡಿದ್ದಾರೆ.
ಜರ್ಮನಿ ಮೂಲದ ವಾಲ್ತೇರ್ ಕಂಪನಿಯ ಗನ್ ಸೀಜ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಐದು ಜೀವಂತ ಗುಂಡುಗಳನ್ನು ಕೂಡ ಸೀಜ್ ಮಾಡಿದ್ದಾರೆ. ಕೊಲೆ ಪ್ರಕರಣ ಆರೋಪ ಹೊತ್ತಿರೋ ದರ್ಶನ್ ಗನ್ ಲೈಸೈನ್ಸ್ ರದ್ದತಿಗೆ ಕಮಿಷನರ್ ಸೂಚನೆ ನೀಡಿದ್ರು.
ಆದ್ರೆ ಗನ್ ನನಗೆ ಅವಶ್ಯಕತೆ ಇರೋದಾಗಿ ದರ್ಶನ್ ಹೇಳಿಕೆ ನೀಡಿದ್ರು. ಸದ್ಯ ಕಮಿಷನರ್ ಆದೇಶದಮೇರೆಗೆ ದರ್ಶನ್ ಗನ್ ಪರವಾನಗಿಯನ್ನ ತಾತ್ಕಲಿಕವಾಗಿ ರದ್ದು ಮಾಡಿ ಆದೇಶ ಹೊರಡಿಸಿದ್ರು. ಈ ಹಿನ್ನೆಲೆ ಇಂದು ದರ್ಶನ್ ಮನೆಯಲ್ಲಿದ್ದ ಗನ್ ಮತ್ತು ಗುಂಡುಗಳನ್ನ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.