Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ನನಗೆ ಈಗಾಗಲೇ ಮದುವೆಯಾಗಿದೆ, ಮನಸಲ್ಲಿರೋದು ಅವನೊಬ್ಬನೇ : ರಶ್ಮಿಕಾ ಮಂದಣ್ಣ

0

ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವಾರು ಊಹಾಪೋಹಗಳಿವೆ. ಇದೀಗ ಮತ್ತೊಂದು ವಿಚಾರ ವೈರಲ್‌ ಆಗುತ್ತಿದೆ. ಅದು ಅವರ ಮದುವೆ ವಿಚಾರ. ಅನೇಕ ಬಾರಿ ನಟಿಯರ ಮದುವೆ ವದಂತಿಗಳು ಹಬ್ಬುತ್ತವೆ.

ಇದು ಸಹಜ. ಆದರೆ ಇದೀಗ ಖುದ್ದು ರಶ್ಮಿಕಾ ಅವರೇ ತಮಗೆ ಮದುವೆ ಆಗಿದೆ ಎಂದು ಹೇಳಿದ್ದಾರೆ ಎನ್ನಲಾದ ವಿಚಾರ ವೈರಲ್‌ ಆಗುತ್ತಿದೆ.

ನಟಿ ರಶ್ಮಿಕಾ ಕರ್ನಾಟಕದ ಕೊಡಗಿನ ಬೆಡಗಿ. ಇವರು ಕನ್ನಡದ ಕಿರಿಕ್‌ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆ ಬಳಿಕ ತೆಲಗು, ತಮಿಳು ಸೇರಿದಂತೆ ಹಿಂದಿ ಚಿತ್ರಗಳಲ್ಲಿಯೂ ನಟಿಸಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ರಶ್ಮಿಕಾ ಅವರ ವಿವಾಹ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಬಾಲಿವುಡ್ ಚಿತ್ರರಂಗದತ್ತ ಗಮನ ಹರಿಸುತ್ತಿದ್ದಾರೆ ಮತ್ತು ಪ್ರಸ್ತುತ ನಟ ರಣಬೀರ್ ಕಪೂರ್ ಜೊತೆ ‘ಅನಿಮಲ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರ ನವೆಂಬರ್‌ನಲ್ಲಿ ತೆರೆಗೆ ಬರಲಿದೆ. ಇತ್ತಿಚೆಗೆ ರಶ್ಮಿಕಾ ನಟ ಟೈಗರ್ ಶ್ರಾಫ್ ಜೊತೆಗೆ ಸಂದರ್ಶನದಲ್ಲಿ ಭಾಗವಹಿಸಿದ್ದರಂತೆ. ಈ ವೇಳೆ ನೀಡಿದ್ದಾರೆ ಎನ್ನಲಾದ ಹೇಳಿಕೆಯೊಂದು ಭಾರೀ ವೈರಲ್ ಆಗಿದೆ.

ನೀವು ಮಂಗಾ ನಾಯಕ ನರುಟೊ ಉಜುಮಕಿಯನ್ನು ರಹಸ್ಯವಾಗಿ ಮದುವೆಯಾದದ್ದು ನಿಜವೇ? ಎಂದು ರಶ್ಮಿಕಾ ಅವರನ್ನು ಕೇಳಿದರಂತೆ. ರಶ್ಮಿಕಾ ಮಂದಣ್ಣ ಕಣ್ಣು ರೆಪ್ಪೆ ಮಿಟುಕಿಸದೆ ತಮ್ಮ ಎಂದಿನ ಹಾಸ್ಯಮಯ ಸ್ವರದಲ್ಲಿ ಉತ್ತರಿಸಿದ್ದಾರೆ, “ನರುಟೊಗೆ ನನ್ನ ಹೃದಯ ಮೀಸಲು. ಅದು ನನ್ನ ನೆಚ್ಚಿನ ಪಾತ್ರ. ಆ ಪಾತ್ರವನ್ನು ನಾನು ಸಂಪೂರ್ಣವಾಗಿ ಮದುವೆಯಾಗಿದ್ದೇನೆ” ಎಂದಿದ್ದಾರೆ ಎಂದು ಹೇಳಲಾಗುತ್ತಿದೆ. ರಶ್ಮಿಕಾ ತಾವು ನರುಟೊನ ಪ್ರೀತಿಯ ‘ಹಿನಾಟಾ’ ಆಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅನಿಮೆ ನಾಯಕಿಯಂತೆ ನೇರಳೆ ಬಣ್ಣದ ಕೂದಲನ್ನು ಹೊಂದುವ ತನ್ನ ಆಸೆಯನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.ವಿಡಿಯೋ ಜೊತೆಗೆ ನರುಟೊ ನಿಂಜಾ ವಾರಿಯರ್‌ನಂತೆ ಕಾಣುವ ಗೊಂಬೆಯೊಂದಿಗೆ ನಟಿಯ ಚಿತ್ರವೂ ವೈರಲ್ ಆಗುತ್ತಿದೆ. ಮಕ್ಕಳಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಅನೇಕರು ಕಾರ್ಟೂನ್ ಪಾತ್ರಗಳಲ್ಲಿ ಆಸಕ್ತಿ ತೋರಿಸುತ್ತಿದ್ದರೆ, ನಟಿ ರಶ್ಮಿಕಾ ಅವರು ಕಾರ್ಟೂನ್‌ ಪಾತ್ರವಾದ ನರುಟೊ ವನ್ನೇ ರಹಸ್ಯವಾಗಿ ಮದುವೆಯಾಗಿರುವುದಾಗಿ ಹೇಳಿದ್ದಾರೆ ಎಂಬ ವಿಚಾರ ಈಗ ಎಲ್ಲೆಡೆ ಸಖತ್‌ ವೈರಲ್‌ ಆಗಿದೆ.

Leave A Reply

Your email address will not be published.