ರಷ್ಯಾ ಸುಂದರಿಯ ‘ಲುಕಿಂಗ್ ಫಾರ್ ಇಂಡಿಯನ್ ಹಸ್ಬೆಂಡ್’ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾಸ್ಕೋದಲ್ಲಿರುವ ಮಾಲ್‌ವೊಂದರಲ್ಲಿ ಭಾರತೀಯ ವರನನ್ನು ಹುಡುಕುತ್ತಿರುವ ಕುರಿತಾಗಿ ಪೋಸ್ಟರ್ ಹಿಡಿದು ಯುವತಿ ನಿಂತಿದ್ದಾಳೆ.
ರಷ್ಯಾದ ಸುಂದರಿ ದಿನಾರಾ ಕೆಂಪು ಸೀರೆಯಲ್ಲಿ ಕಂಗೊಳಿಸುತ್ತಿದ್ದು, ಕೈಯಲ್ಲಿ ನನಗೆ ಭಾರತೀಯ ವರ ಬೇಕು ಎಂದು ಪೋಸ್ಟ್ ಹಿಡಿದು ನಿಂತಿರುವ ಪೋಸ್ಟರ್‌ನ್ನು ಅಪ್‌ಲೋಡ್ ಮಾಡಿದ್ದಾಳೆ.
ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಷ್ಟೇ ಅಲ್ಲದೇ, ಭಾರತೀಯ ಯುವಕನನ್ನು ಮದುವೆಯಾಗಲು ತನ್ನ ಆಸಕ್ತಿಯನ್ನು ದಿನಾರಾ ವ್ಯಕ್ತಪಡಿಸಿದ್ದು, ತನಗೆ ವರನನ್ನು ಹುಡುಕಲು ಸಹಾಯ ಮಾಡುವಂತೆ ತನ್ನ ಇನ್ಸ್ಟಾಗ್ರಾಮ್ ಅನುಯಾಯಿಗಳನ್ನು ಕೇಳಿದ್ದಾಳೆ.