ಕಲ್ಕಿ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಕಲ್ಕಿಯಾ ನಟನಾ ಕೌಶಲ್ಯವು ಸಿನಿ ರಂಗದಲ್ಲಿ ಸಾಬೀತಾದ ವಿಷಯ. ಇವರು ನಟಿಸಿರುವ ಮೇಡ್ ಇನ್ ಹೆವೆನ್ ಸೀಸನ್ ೨ ಬಿಡುಗಡೆಗೆ ಸಜ್ಜಾಗುತ್ತಿದೆ. ಆದ್ರೆ ವಿವಾದ ಯಾವಾಗಲೂ ಇವರ ಬೆನ್ನು ಹತ್ತುತ್ತಲೇ ಇರುತ್ತದೆ. ೨೦೨೦ ರಲ್ಲಿ ಮದುವೆಯಾಗದೇ ಹೆಣ್ಣು ಮಗುವಿಗೆ ಜನುಮ ನೀಡಿದ ಈಕೆ, ಮಗುವಿಗೆ ಸಫೋ ಎಂದು ಹೆಸರಿಟ್ಟಿದ್ದಾರೆ.ಬಾಯ್ ಪ್ರೆಂಡ್ ಹರ್ಷ್‌ಬರ್ಗ್ ಜೊತೆ ಮಗು ಜನಿಸಿದ ಮೇಲೆ ಜನ ತಲೆಗೊಂದರಂತೆ ಮಾತನಾಡಲು ಆರಂಭಿಸಿದರಂತೆ.ಮದುವೆಯಾಗದೇ ಇರುವುದು ನಮ್ಮ ವಯುಕ್ತಿಕ ನಿರ್ಧಾರವಾಗಿತ್ತು ಅಂದಿದ್ದಾರೆ ಕಲ್ಕಿ. 29 ವರ್ಷದ ನಟಿ ಈ ಹಿಂದೆ ನಿರ್ದೇಶಕ ಅನುರಾಗ್ ಕಶ್ಯಪ್ ಅವರನ್ನು ಮದುವೆಯಾಗಿ ನಂತರ ಡಿವೋರ್ಸ್ ಆಗಿತ್ತು. ಈಗಿನ ಬಾಯ್ ಪ್ರೆಂಡ್ ಹರ್ಷ್ ಬರ್ಗ್ ಗೆ ಮದುವೆಯಲ್ಲಿ ಆಸಕ್ತಿ ಇಲ್ಲ ನನಗೂ ಇಲ್ಲ ಹಾಗಾಗಿ ನಾವು ಒಟ್ಟಿಗೆ ವಾಸಿಸುತ್ತಿದ್ದೇವೆ ಆದರೆ ನಾವು ಮದುವೆಯಾಗಲ್ಲ ಎಂದಿದ್ದಾರೆ. ಜನವರಿ 2020 ರಲ್ಲಿ ಸೋಪಾ ಇವರ ಜೀವನದಲ್ಲಿ ಬಂದಾಗಿನಿಂದ ಇವರಿಬ್ಬರು ಗೋವಾದಲ್ಲಿ ವಾಸಿಸುತ್ತಿದ್ದಾರೆ ಹಾಗೂ ಶೂಟಿಂಗ್ ವೇಳೆ ಮುಂಬೈ ಗೆ ಬಂದು ಮತ್ತೆ ವಾಪಸ್ ತೆರಳುತ್ತಾರಂತೆ ಕಲ್ಕಿ.ಹಾಗೂ ಮಗಳು ಸ್ವಚ್ಛಂದ ಪರಿಸರದ ಮಧ್ಯೆ ಬೆಳೆಯಬೇಕು ಎನ್ನುವುದು ಕಲ್ಕಿಯ ಆಸೆ ಅದಕ್ಕೆ ಅವರು ಗೋವಾದಲ್ಲೇ ಇರಲು ಇಷ್ಟ ಪಡುತ್ತಾರಂತೆ. ಕಲ್ಕಿಯು ಮೇಡ್ ಇನ್ ಹೆವೆನ್ ಸೀಸನ್ 2 ರಿಲೀಸ್ ಗೆ ಸಿದ್ಧವಾಗಿದೆ. ಇದು ಏಳು ಸಂಚಿಕೆಗಳನ್ನು ಒಳಗೊಂಡಿದ್ದು ಆಗಸ್ಟ್ 10 ರಂದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.