ಮುಂಬೈ; ದೇಶದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ರಾಹುಲ್ ಗಾಂಧಿ ಅವರ ವಿವಾಹದ ಬಗ್ಗೆ ಆಗಾಗ್ಗೆ ಏನಾದರೊಂದು ಸುದ್ದಿ ಸದ್ದು ಆಗುತ್ತಲೇ ಇರುತ್ತದೆ. ಇದೀಗ ಖ್ಯಾತ ನಟಿಯೊಬ್ಬರು ನಾನು ರಾಹುಲ್ ಗಾಂಧಿಯವರನ್ನು ಮದುವೆಯಾಗಲು ರೆಡಿಯಾಗಿದ್ದೇನೆ ಎಂದಿದ್ದಾರೆ. ಅಂದ್ಹಾಗೆ ಆ ನಟಿ ಬೇರಾರು ಅಲ್ಲ ಶೆರ್ಲಿನ್ ಛೋಪ್ರಾ. ಅಲ್ಲದೇ ಅದಕ್ಕೊಂದು ಷರತ್ತು ಕೂಡ ಹಾಕಿದ್ದಾರೆ. ತಮ್ಮ ಸರ್ ನೇಮ್ ಛೋಪ್ರಾ ಎಂದು ಹಾಕಲು ಸಮ್ಮತಿಸಬೇಕು ಎಂದು ಹೇಳಿದ್ದಾರೆ. ಮುಂಬೈನ ಬಾಂದ್ರಾಬ್ಯಾಂಡ್‌ಸ್ಟಾಂಡ್ ಬೀಚ್‌ಗೆ ಇತ್ತೀಚಿಗೆ ಶೆರ್ಲಿನ್ ಛೋಪ್ರಾ ಬಂದಿದ್ದಾಗ ಪತ್ರಕರ್ತರು ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮದುವೆಯಾಗಲು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಸಿದ್ಧಳಿದ್ದೇನೆ ಎಂದು ಹೇಳಿದ ಅವರು, ಛೋಪ್ರಾ ಎಂಬ ಸರ್ ನೇಮ್ ನ್ನು ಮುಂದುವರಿಸಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.