ಚಿತ್ರದುರ್ಗ:ಚಿತ್ರದುರ್ಗ ಗ್ರಾಮೀಣ ಉಪ ವಿಭಾಗ ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಹಿರೆಗುಂಟನೂರು ಶಾಖಾ ವ್ಯಾಪ್ತಿಯಲ್ಲಿ ಬರುವ ಹಿರೇಗುಂಟನೂರು ಗ್ರಾಮದಿಂದ ಗುತ್ತಿನಾಡು ಗ್ರಾಮದವರೆಗೆ 11ಕೆವಿ ಲಿಂಕ್ ಲೈನ್ ಮಾರ್ಗ ರಚಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿAದ ಇದೇ ಆಗಸ್ಟ್ 24 ರಿಂದ 27 ರವರೆಗೆ ಬೆಳಿಗ್ಗೆ 11 ಗಂಟೆಯಿAದ ಸಂಜೆ 5 ಗಂಟೆಯರೆಗೆ ಹಿರೇಗುಂಟನೂರು ವಿದ್ಯುತ್ ವಿತರಣಾ ಕೇಂದ್ರದಿAದ ಸರಬರಾಜಾಗುವ 11ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಅಡಚಣೆಯಾಗುವ ಮಾರ್ಗಗಳು: 66/11 ಕೆವಿ ಹಿರೆಗುಂಟನೂರು ವಿವಿ ಕೇಂದ್ರದಿAದ ಸರಬರಾಜಾಗುವ 11 ಕೆವಿ ಮಾರ್ಗದ ಎಫ್-9 ಸೀಬಾರ ಮತ್ತು ಎಫ್-10 ಬೀರಾವರ ಎನ್.ಜೆ.ವೈ 11 ಕೆ.ವಿ ಮಾರ್ಗಗಳಲ್ಲಿ ಅಡಚಣೆಯಾಗುತ್ತದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: 66/11 ಕೆವಿ ಹಿರೇಗುಂಟನೂರು ವ್ಯಾಪ್ತಿಯ ಹಿರೇಗುಂಟನೂರು ಗೊಲ್ಲರಹಟ್ಟಿ, ಚಿಕ್ಕಪುರ, ಸೀಬಾರ, ಗುತ್ತಿನಾಡು, ಈಚಲನಾಗೇನಹಳ್ಳಿ, ಹುಣಸೆಕಟ್ಟೆ, ಸಾದರಹಳ್ಳಿ, ಕೆ.ಬಳ್ಳೆಕಟ್ಟೆ ಹಾಗೂ ಬೀರಾವರ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಚಿತ್ರದುರ್ಗ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
 
				 
         
         
         
															 
                     
                     
                     
                     
                    


































 
    
    
        