Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

‘ನಾವು ಬಿತ್ತಿರುವ ಬೀಜದ ಮರದ ಹಣ್ಣನ್ನು ಬಿಜೆಪಿಯವರು ತಿನ್ನುತ್ತಿದ್ದಾರೆ’-ಬಿಕೆ ಹರಿಪ್ರಸಾದ್​

0

ಕಲಬುರಗಿ: ಬೆಂಗಳೂರಿನಲ್ಲಿ ಇಸ್ರೋ ಸಂಸ್ಥೆಗೆ ಜಾಗ ನೀಡಿದ್ದು ಕಾಂಗ್ರೆಸ್ ಸರ್ಕಾರ. ನಾವು ಬಿತ್ತಿರುವ ಬೀಜದ ಮರದ ಹಣ್ಣನ್ನು ಬಿಜೆಪಿಯವರು ತಿನ್ನುತ್ತಿದ್ದಾರೆ ಎಂದು ವಿಧಾನ್ ಪರಿಷತ್​ ಸದಸ್ಯ ಬಿ.ಕೆ.ಹರಿಪ್ರಸಾದ್​ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಅವರ, ಇಂದು ಇಸ್ರೋದ ಮಹತ್ವಾಕಾಂಕ್ಷಿ ಆದಿತ್ಯ L-1​​​​ ನೌಕೆ ಉಡಾವಣೆಯಾಗಿದೆ. ಕಾಂಗ್ರೆಸ್ ವೈಜ್ಞಾನಿಕ ನೆಲಗಟ್ಟಿನಲ್ಲಿ ಅಚಲ ನಂಬಿಕೆ ಇಟ್ಟುಕೊಂಡಿದೆ. ನಾವು ಬಿಜೆಪಿಯವರ ರೀತಿ ಮೂಢನಂಬಿಕೆ ಇಟ್ಟುಕೊಂಡಿಲ್ಲ. ಇಸ್ರೋ ಸಂಸ್ಥೆಗೆ ಜಾಗ ನೀಡಿದ್ದು ಕಾಂಗ್ರೆಸ್ ಸರ್ಕಾರ. ನಾವು ಬಿತ್ತಿರುವ ಬೀಜದ ಮರದ ಹಣ್ಣನ್ನು ಬಿಜೆಪಿಯವರು ತಿನ್ನುತ್ತಿದ್ದಾರೆ ಎಂದರು .

ಇದೇ ವೇಳೆ ಒನ್ ನೇಷನ್ ಒನ್ ಎಲೆಕ್ಷನ್ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿ ಬಂದ ಮೇಲೆ ಘೋಷಣೆಗಳಿಗೆ ಏನು ಕಡಿಮೆ ಇಲ್ಲ. ರಾಷ್ಟ್ರದಲ್ಲಿನ ವೈವಿದ್ಯತೆಯನ್ನು ಹಾಳು ಮಾಡುತ್ತಿದ್ದಾರೆ. ವಿವೇಕಾನಂದರ ಆಶಯದ ವಿರುದ್ಧ ಬಿಜೆಪಿ ನಿರ್ಧಾರ ಕೈಗೊಳ್ಳುತ್ತದೆ. ಮುಂದೆ ಒನ್ ನೇಷನ್ ಒನ್ ಲೀಡರ್ ಅಂದರೂ ಅನ್ನಬಹುದು. ದೇಶದಲ್ಲಿ ಚುನಾವಣೆಯನ್ನು ಇಡಿ ಬಳಸದೆ ನಡೆಸಬೇಕಿದೆ ಎಂದರು.

ಇನ್ನು ತಮಗೆ ಅವರಿಗೆ ಮಂತ್ರಿಸ್ಥಾನ ಸಿಗದೆ ಇರುವ ವಿಚಾರವಾಗಿ ಮಾತನಾಡಿದ ಅವರು ನಾನು ಪಕ್ಕಾ ಕಾಂಗ್ರೆಸ್​ನವನು. ನನ್ನ ಹೋರಾಟ ನನ್ನ ಮಂತ್ರಿ ಮಾಡಿಲ್ಲ ಅಂತ ಅಲ್ಲ. ಸಣ್ಣ ಸಮುದಾಯಗಳಿಗೆ ಅವಕಾಶ‌ ಸಿಗಬೇಕು ಅನ್ನೋದು ನಮ್ಮ ಹೋರಾಟ. ಅದಕ್ಕಾಗಿ ನಾನು ಬೀದಿಗಳಿದು ಹೋರಾಟಕ್ಕೂ ಕೂಡಾ ಸಿದ್ದನಿದ್ದೇನೆ. ಇಂದಿರಾಗಾಂಧಿ ಅವರನ್ನು ನೋಡಿ ಇಂದಿನವರು ಕಲಿಬೇಕು. ಜವಾನನಿಂದ ದಿವಾನವರಗೆ ಒಂದೇ ಜಾತಿಯವರನ್ನು ಹಾಕಿಕೊಳ್ಳಲು ಆಗಲ್ಲ. ಎಲ್ಲ ವರ್ಗದವರಿಗೂ ಅವಕಾಶ ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿ.ಎಲ್ ಸಂತೋಷ. ಆಪರೇಷನ್ ಕಮಲದಲ್ಲಿ ಡಾಕ್ಟರೇಟ್ ತಗೆದುಕೊಂಡಿದ್ದಾರೆ ಎಂದುಲೇವಡಿ ಮಾಡಿದರು.

Leave A Reply

Your email address will not be published.