ಬೆಂಗಳೂರು: ರಾಜ್ಯದಿಂದ ವರ್ಷವೊಂದಕ್ಕೆ 4 ಲಕ್ಷದ 30 ಸಾವಿರ ಕೋಟಿ ತೆರಿಗೆಯನ್ನು ಸಂಗ್ರಹಿಸುವ ಕೇಂದ್ರ ರಾಜ್ಯದ ಪಾಲಿನ ಪೈಕಿ ವಾಪಾಸ್ ಕೊಡೋದು ಮಾತ್ರ ನೂರು ರೂಪಾಯಿಗೆ ಬರೀ 12 ರಿಂದ13 ರೂ.ಗಳು ಎಂದು ಸಿಎಂ ಸಿದ್ದರಾಮಯ್ಯ ಅವರು ಅಸಮಾಧಾನವನ್ನು ಹೊರಹಾಕಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ವರ್ಷ ಕರ್ನಾಟಕಕ್ಕೆ ಕೇಂದ್ರದಿಂದ ಬಂದ ತೆರಿಗೆಯ ಮೊತ್ತ 50 ಸಾವಿರದ 252 ಕೋಟಿಯಷ್ಟೇ ಎಂದರು. ದೇಶದಲ್ಲೇ ಮಹಾರಾಷ್ಟ್ರ ರಾಜ್ಯವನ್ನು ಹೊರತುಪಡಿಸಿದರೆ ಕರ್ನಾಟಕ ತೆರಿಗೆ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ, ಬಿಜೆಪಿ ರಾಜ್ಯಗಳೇ ಅಧಿಕವಾಗಿರುವುದರಿಂದ ನಮ್ಮ ಧ್ವನಿ ಕೇಂದ್ರಕ್ಕೆ ಕೇಳುತ್ತಿಲ್ಲ ಅಂತಾ ಸಿಎಂ ಹೇಳಿದರು.