ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಗಡುವನ್ನ ಸರ್ಕಾರ ವಿಸ್ತರಿಸಿದೆ. ಪಡಿತರ ಚೀಟಿಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ, ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ
ವಿತರಣಾ ಸಚಿವಾಲಯ ತಿಳಿಸಿದೆ.
ಲಿಂಕ್ ಮಾಡಲು ಹೊಸ ಗಡುವು ಸೆಪ್ಟೆಂಬರ್ 30-2024 ಆಗಿದೆ. ಹಿಂದಿನ ಗಡುವು ಜೂನ್ 30, 2024 ಇತ್ತು. ಸರ್ಕಾರವು ಈಗಾಗಲೇ ಹಲವಾರು ಬಾರಿ ಈ ಗಡುವನ್ನು ವಿಸ್ತರಿಸಿದೆ.
ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡುವ ಮೂಲಕ ಅಕ್ರಮಗಳಿಗೆ ಕಡಿವಾಣ ಹಾಕಲು ಸಚಿವಾಲಯ ಸಿದ್ಧತೆ ನಡೆಸಿದೆ.































