ತಿರುಪತಿ : ತಿರುಪತಿ ಶ್ರೀವಾರಿಯ ಮೇಲೆ ಅಪಾರ ಭಕ್ತಿ ಹೊಂದಿದ್ದ ಭಕ್ತರೊಬ್ಬರು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆದಿದ್ದಾರೆ. ಶ್ರೀಕಾಕುಳಂ ಮೂಲದ ಮಹಂತಿ ಶ್ರೀನಿವಾಸ ರಾವ್ 449 ಬಾರಿ ತಿರುಪತಿಗೆ ಪಾದಯಾತ್ರೆ ಮೂಲಕ ಸಾಗಿ ತಿರುಪತಿ ತಿರುಮಲನ ದರ್ಶನ ಪಡೆದು ದಾಖಲೆ ಬರೆದಿದ್ದಾರೆ. ಪ್ರತಿ ಬಾರಿಯೂ ಮೆಟ್ಟಿಲು ಹತ್ತಿ ದರ್ಶನ ಪಡೆಯುತ್ತಿದ್ದರಿಂದ ಅವರಿಗೆ ಈ ಮನ್ನಣೆ ಸಿಕ್ಕಿದೆ. ಇದಲ್ಲದೆ ಪ್ರತಿದಿನ 2 ಗಂಟೆಗಳ ಕಾಲ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಕೆಲಸ ಕೂಡ ಮಾಡುತ್ತಾರೆ. ಶ್ರೀನಿವಾಸ ರಾವ್ 1997 ರಲ್ಲಿ ತಿರುಪತಿಗೆ ತಮ್ಮ ಮೊದಲ ಕಾಲ್ನಡಿಗೆಯನ್ನು ಪ್ರಾರಂಭಿಸಿದರು. ಅಂದಿನಿಂದ ಅವರು 26 ಜುಲೈ 2018 ರವರೆಗೆ 175 ಬಾರಿ ಶ್ರೀವಾರಿ ದರ್ಶನವನ್ನು ಪಡೆದಿದ್ದಾರೆ. 1997 ರಿಂದ 2004 ರವರೆಗೆ ಒಮ್ಮೆ ಮಾತ್ರ ಭೇಟಿ ನೀಡಿದ್ದರು. 2004 ರಿಂದ 2009 ರವರೆಗೆ 28 ಬಾರಿ ಏಳು ಬೆಟ್ಟಗಳ ಒಡೆಯನ ದರ್ಶನ ಪಡೆದಿದ್ದಾರೆ. ಅಲ್ಲದೆ 2010-2014ರಲ್ಲಿ 21 ಬಾರಿ, 2015ರಲ್ಲಿ 20 ಬಾರಿ ಹಾಗೂ 2016ರಲ್ಲಿ 15 ಬಾರಿ ಶ್ರೀವಾರಿ ದರ್ಶನ ಪಡೆದಿದ್ದಾರೆ. ಅದರಂತೆ 2017ರಲ್ಲಿ ತಮ್ಮ 50ನೇ ವಯಸ್ಸಿನಲ್ಲಿ 50 ಬಾರಿ ಸ್ವಾಮಿಯ ದರ್ಶನ ಪಡೆದ ಶ್ರೀನಿವಾಸ ರಾವ್ ಅಂದಿನಿಂದ ಈ ವರ್ಷ ಜೂನ್ 26ರವರೆಗೆ 40 ಬಾರಿ ಒಟ್ಟು 449 ಬಾರಿ ಕಾಲ್ನಡಿಯ ಮೂಲಕ ತಿರುಪತಿ ತಿರುಮಲ ದರ್ಶನ ಪಡೆದಿದ್ದಾರೆ. ಮಾತ್ರವಲ್ಲದೆ ಒಂದೇ ದಿನದಲ್ಲಿ ಒಮ್ಮೆ 3 ಬಾರಿ ಬೆಟ್ಟ ಹತ್ತಿ ಸ್ವಾಮಿಯ ದರ್ಶನ ಮಾಡಿದ್ದಾರೆ. ಈ ತೀವ್ರ ಭಕ್ತಿಗೆ ಮೆಚ್ಚಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮಾನ್ಯತೆ ನೀಡಿದೆ. 27ನೇ ವಯಸ್ಸಿನಿಂದಲೂ ತಿರುಪತಿ ಬೆಟ್ಟ ಹತ್ತುತ್ತಾ ಶ್ರೀನಿವಾಸ ರಾವ್ ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದಾರೆ. ವೈಕುಂಠ ಏಕಾದಶಿ ಮತ್ತು ದ್ವಾದಶಿಯಂದು ತಪ್ಪದೆ ತಿರುಪತಿಗೆ ತೆರಳುತ್ತಾರೆ.
![](https://bcsuddi.com/wp-content/uploads/2025/02/wd.jpg)