ಹೌರಾ : ಪಿಕ್‌ನಿಕ್‌ಗೆ ತೆರಳಿದ್ದ ವೇಳೆ ದೋಣಿ ನದಿಯಲ್ಲಿ ಮುಳುಗಿ ಐವರು ನಾಪತ್ತೆಯಾಗಿದ್ದಾರೆ. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ರೂಪನಾರಾಯಣ ನದಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಹೌರಾ ಜಿಲ್ಲೆಯ ಬೆಲ್ಗಾಚಿಯಾ, ಶಿಬ್‌ಪುರ ಮತ್ತು ಬಗ್ನಾನ್‌ನಿಂದ 19 ಜನರ ಗುಂಪು ಪಶ್ಚಿಮ ಮೇದಿನಿಪುರ ಜಿಲ್ಲೆಯ ದಾಸ್‌ಪುರದ ಟ್ರಿಬೇನಿ ಪಾರ್ಕ್‌ಗೆ ಪಿಕ್‌ನಿಕ್‌ಗೆ ತೆರಳಿತ್ತು. ಗುರುವಾರ ರಾತ್ರಿ ಮನೆಗೆ ಮರಳುತ್ತಿದ್ದ ವೇಳೆ ನದಿಯ ಮಧ್ಯದಲ್ಲಿ ದೋಣಿ ಮಗುಚಿದೆ. ಇನ್ನು, ದೋಣಿ ಮಗಚಿದ ವೇಳೆ ನದಿಯಲ್ಲಿ ಕಿರುಚಾಟ ಕೇಳಿ ಇತರ ದೋಣಿಗಳ ಸಹಾಯದಿಂದ ಸಾಧ್ಯವಾದಷ್ಟು ಜನರನ್ನು ರಕ್ಷಿಸಲಾಗಿದೆ. ಆದರೆ, ಐವರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ನಡೆಯುತ್ತಿದೆ.