Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಪ್ರತಾಪ್ ಸಿಂಹ ವಿರುದ್ದ ಅವಹೇಳನಾಕಾರಿ ಪೋಸ್ಟ್ – ಟ್ರಾಫಿಕ್ ಹೆಡ್ ಕಾನ್ಸ್​​ಟೇಬಲ್​ ಅಮಾನತು

0

ಮೈಸೂರು: ಫೇಸ್​ಬುಕ್​ನಲ್ಲಿ ಸಂಸದ ಪ್ರತಾಪ್ ಸಿಂಹ ಬಗ್ಗೆಅವಹೇಳನಾಕಾರಿ ಪೋಸ್ಟ್ ಹಾಕಿದ್ದ ಮೈಸೂರಿನ ವಿವಿ ಪುರಂ ಠಾಣೆಯ ಟ್ರಾಫಿಕ್ ಹೆಡ್ ಕಾನ್ಸ್​​ಟೇಬಲ್​ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಇಲಾಖಾ ವಿಚಾರಣೆ ಬಾಕಿ ಇರಿಸಿ ಟ್ರಾಫಿಕ್ ಹೆಡ್ ಕಾನ್ಸ್​​ಟೇಬಲ್​ ಬಿ.ಪ್ರದೀಪ್ ಅವರನ್ನು ಅಮಾನತು ಮಾಡಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶಿಸಿದ್ದಾರೆ.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿಗಳ ಶರಣಾಗತಿಗೆ ಸೂಚಿಸಿದ ಗಡುವು ಅಂತ್ಯ

ಇನ್ನು ಟ್ರಾಫಿಕ್ ಹೆಡ್ ಕಾನ್ಸ್​​ಟೇಬಲ್ ಬಿ.ಪ್ರದೀಪ್, ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಇದನ್ನು ಗಮನಿಸಿದ ಸಂಸದ ಪ್ರತಾಪ ಸಿಂಹ ಹಾಕಲಾಗಿದ್ದ ಕಮೆಂಟ್ ಸ್ಕ್ರೀನ್​ಶಾಟ್ ಜೊತೆ ಪೊಲೀಸ್ ಕಮಿಷನರ್​​ಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು.

ದೂರಿನ ಮೇರೆಗೆ ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Leave A Reply

Your email address will not be published.