ಸ್ವಿಟ್ಜರ್ಲೆಂಡ್:ಪ್ರವಾಸಿ ವಿಮಾನ ಪತನಗೊಂಡು ಪೈಲಟ್ ಹಾಗೂ ಇಬ್ಬರು ಪ್ರಯಾಣಿಕರು ಸಾವನ್ನಪ್ಪ್ಪಿರುವ ಘಟನೆ ಸ್ವಿಟ್ಜರ್ಲೆಂಡ್‌ನ ಪಾಂಟ್ಸ್-ಡಿ-ಮಾರ್ಟೆಲ್ ಪ್ರದೇಶದಲ್ಲಿ ನಡೆದಿದೆ.
ಲಘು ಪ್ರವಾಸಿ ವಿಮಾನವು ಸ್ವಿಸ್ ಕ್ಯಾಂಟನ್ ನ್ಯೂಚಾಟೆಲ್‌ನ ಪಾಂಟ್ಸ್-ಡಿ-ಮಾರ್ಟೆಲ್ ಬಳಿ ಕಡಿದಾದ ಭೂಪ್ರದೇಶದಲ್ಲಿ ಸ್ಥಗಿತಗೊಂಡು ಅಪಘಾತ ಸಂಭವಿಸಿದ ಕಾರಣ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿದೆ ಇದ್ದರಿಂದ ಯಾರನ್ನು ಕೂಡ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ ಎಂದು ಸ್ವಿಸ್ ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಪೈಲಟ್ ಮತ್ತು ಇಬ್ಬರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಹೀಗಾಗಿ, ವಿಮಾನ ಪತನಕ್ಕೆ ಸೂಕ್ತ ಕಾರಣ ತಿಳಿದುಬಂದಿಲ್ಲ ಇದ್ದರಿಂದಾಗಿ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.