ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾನುವಾರ ನಡೆದ ಫಿಫಾ ಮಹಿಳಾ ವಿಶ್ವಕಪ್ 2023ರ ಫೈನಲ್‌ನಲ್ಲಿ ಸ್ಪೇನ್ ತಂಡವು 1-0 ಗೋಲುಗಳಿಂದ ಇಂಗ್ಲೆಂಡ್ ಅನ್ನು ಸೋಲಿಸಿತು. ಇದರೊಂದಿಗೆ ಚೊಚ್ಚಲ ಬಾರಿಗೆ ಫಿಫಾ ಮಹಿಳಾ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಫೈನಲ್‌ನಲ್ಲಿ ಓಲ್ಗಾ ಕಾರ್ಮೋನಾ ಏಕೈಕ ಗೋಲು ಗಳಿಸಿದರು. FIFA ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ ಸ್ಪೇನ್ ಮತ್ತು ಇಂಗ್ಲೆಂಡ್ ಎರಡೂ ತಮ್ಮ ಮೊದಲ ಫೈನಲ್ ಆಡುತ್ತಿವೆ. 1991ರಿಂದ 2023ರ ವರೆಗೆ ಒಟ್ಟು ಒಂಬತ್ತು ವಿಶ್ವಕಪ್ ಟೂರ್ನಿಗಳು ನಡೆದಿದ್ದು, ಕಿರೀಟ ಮುಡಿಗೇರಿಸಿದ ಐದನೇ ತಂಡ ಎಂಬ ಗೌರವ ಸ್ಪೇನ್‌ಗೆ ಒಲಿಯಿತು. ಈ ಮೂಲಕ ಅಮೆರಿಕ, ಜರ್ಮನಿ, ನಾರ್ವೆ ಮತ್ತು ಜಪಾನ್ ತಂಡಗಳ ಸಾಲಿಗೆ ಸೇರಿತು.