Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಫೋನ್​ನಲ್ಲಿ ಮಾತಾಡುತ್ತಲೇ CM ಗೆ ಸೆಲ್ಯೂಟ್ : ಎಎಸ್‌ಪಿ ವರ್ಗಾವಣೆ ವಿಡಿಯೋ ವೈರಲ್

0

ಉತ್ತರಾಖಂಡ್​ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಮುಖ್ಯಮಂತ್ರಿ ಧಾಮಿ ತಮ್ಮ ಹೆಲಿಕಾಪ್ಟರ್‌ನಿಂದ ಇಳಿಯುತ್ತಿದ್ದಂತೆ, ಕೋಟ್‌ದ್ವಾರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಸುಯಲ್ ಫೋನ್‌ನಲ್ಲಿ ಮಾತನಾಡುತ್ತಾ ಸೆಲ್ಯೂಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಉನ್ನತ ಅಧಿಕಾರಿಗಳ ಕಣ್ಣಿಗೂ ಈ ವಿಡಿಯೋ ಕಾಣಿಸಿಕೊಂಡಿದೆ. ಇದನ್ನು ಪರಾಮರ್ಷಿಸಿದ ಉನ್ನತಾಧಿಕಾರಿಗಳು ತತಕ್ಷಣವೇ ಎಎಸ್‌ಪಿ ಶೇಖರ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದಾರೆ. ಹೌದು ಸಿಎಂಗೆ ಮೊಬೈಲ್​​ನಲ್ಲಿ ಮಾತನಾಡುತ್ತ ಸೆಲ್ಯೂಟ್ ಮಾಡಿದ್ದ ಪೊಲೀಸ್ ಅಧಿಕಾರಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ. ಈ ಘಟನೆಯು ಕೊಟ್ದ್ವರ್​ ಪ್ರದೇಶದ ನೆರಹಾನಿ ವೀಕ್ಷಣೆ ವೇಳೆ ನಡೆದಿತ್ತು. ಇದೀಗ ಅವರನ್ನು ನರೇಂದ್ರ ನಗರದ ಪೊಲೀಸ್ ಟ್ರೈನಿಂಗ್ ಸೆಂಟರ್​ಗೆ ವರ್ಗಾವಣೆ ಮಾಡಲಾಗಿದೆ. ಅಂದ್ಹಾಗೆ ಈ ಘಟನೆಯು ಆಗಸ್ಟ್​ 11 ರಂದು ನಡೆದಿತ್ತು.

Leave A Reply

Your email address will not be published.