ಲೋಕಸಭೆಯಲ್ಲಿ ತಮ್ಮ ಭಾಷಣವನ್ನು ಮುಗಿಸಿದ ನಂತರ ರಾಹುಲ್ ಗಾಂಧಿ ಅವರು ಬಿಜೆಪಿಯ ಮಹಿಳಾ ಸಂಸದೆಗೆ ‘ಫ್ಲೈಯಿಂಗ್ ಕಿಸ್’ ನೀಡಿದ್ದಾರೆ ಎನ್ನಲಾದ ಆರೋಪದ ಮಧ್ಯೆ, ಬಿಹಾರದ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಅವರು ತಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ನೀತು ಸಿಂಗ್, ‘ನಮ್ಮ ರಾಹುಲ್ ಗಾಂಧಿಗೆ ಮಹಿಳೆಯರ ಕೊರತೆ ಇಲ್ಲ. ಅವರು ಫ್ಲೈಯಿಂಗ್ ಕಿಸ್ ನೀಡಬೇಕೂಂತ ಇದ್ದಿದ್ರೆ ಅವರು ಅದನ್ನು ಯುವತಿಗೆ ನೀಡುತ್ತಿದ್ದರು. ಅವರು ಯಾಕೆ ಮುದುಕಿಗೆ ಫ್ಲೈಯಿಂಗ್ ಕಿಸ್ ನೀಡುತ್ತಾರೆ..? ಈ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ. ವೀಡಿಯೊ ವೈರಲ್ ಆಗುತ್ತಿದ್ದಂತೆ, ಆಡಳಿತಾರೂಢ ಬಿಜೆಪಿಯು ನೀತು ಸಿಂಗ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದೆ.
20 ಕ್ಕೂ ಹೆಚ್ಚು ಮಹಿಳಾ ಸಂಸದರ ಸಮ್ಮುಖದಲ್ಲಿ ರಾಹುಲ್ ಗಾಂಧಿ ಬುಧವಾರ ಸಂಸತ್ತಿನಲ್ಲಿ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂಬ ಆರೋಪವನ್ನು ಬಿಜೆಪಿ ಸಂಸದೆ ಮಾಡುವ ಮೂಲಕ ಕೋಲಾಹಲವನ್ನು ಉಂಟುಮಾಡಿದ್ದರು. ನಂತರ ಬಿಜೆಪಿ ಸಂಸದೆಯರು ವಯನಾಡ್ ನ ಕಾಂಗ್ರೆಸ್ ಸಂಸದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಹಿ ಮಾಡಿ ಪತ್ರಕ್ಕೆ ಕಳುಹಿಸಿದ್ದರು.
[vc_row][vc_column]
BREAKING NEWS
- ಬೆಂಗಳೂರಿನ 7ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ
- ಗ್ರಾಹಕರಿಗೆ ಶಾಕ್ : ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆ
- ವಿಶ್ವ ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದುಬೈಗೆ ತೆರೆಳಿದ ಮೋದಿ – ಅದ್ದೂರಿ ಸ್ವಾಗತ
- ಶಾಲಾ ಶಿಕ್ಷಕಿ ಕಿಡ್ನಾಪ್ ಪ್ರಕರಣ ಸುಖಾಂತ್ಯ: ಅಪಹರಣಕಾರರ ಬಂಧನ
- ಭ್ರೂಣ ಹತ್ಯೆ ಪ್ರಕರಣ- ಸಿಐಡಿ ತನಿಖೆಗೆ ಒಪ್ಪಿಸಿದ ಸಿಎಂ
- ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ರಜನೀಶ್ ಗೋಯಲ್ ನೇಮಕ
- ಏರ್ ಇಂಡಿಯಾ ವಿಮಾನದೊಳಗೆ ನೀರು ಸೋರಿಕೆ- ಪ್ರಯಾಣಿಕರ ಪರದಾಟ
- ದ್ವಿತೀಯ ಪಿಯುಸಿ ಪಾಸಾದವರು ಅರಣ್ಯ ಇಲಾಖೆಯ 540 ರಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು.!
- ರಾಜ್ಯದ ಮುಖ್ಯ ಕಾರ್ಯದರ್ಶಿ ಅಜನೀಶ್ ಗೋಯೆಲ್.!
- ಹಲವೆಡೆ ಡಿಸೆಂಬರ್ 5ರವರೆಗೆ ಮಳೆಯಾಗಲಿದೆ: ಹವಾಮಾನ ಇಲಾಖೆ .!