ದೆಹಲಿ : ದಿ ಕೇರಳ ಸ್ಟೋರಿ ಸಿನಿಮಾವನ್ನು ಪಶ್ಚಿಮ ಬಂಗಾಳದಲ್ಲಿ ನಿಷೇಧಿಸಿತ್ತು. ಆದರೆ ಈ ತೀರ್ಮಾನಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಸಂಸ್ಕೃತಿ ಮತ್ತು ಭಾವನೆಗಳಿಗೆ ವಾಕ್ ಸ್ವಾತಂತ್ರ್ಯವನ್ನು ತರಲು ಸಾಧ್ಯವಿಲ್ಲ ಎಂದು ಹೇಳಿದರು. ಜತೆಗೆ ತಮಿಳುನಾಡಿನಲ್ಲಿ ಥಿಯೇಟರ್ ಭದ್ರತೆ ನೀಡಲು ಸೂಚನೆ ನೀಡಲಾಗಿದೆ. ಭಾರಿ ವಿವಾದವನ್ನು ಸೃಷ್ಟಿಸಿರುವ ದಿ ಕೇರಳ ಸ್ಟೋರಿಯನ್ನು ಬಂಗಾಳದಲ್ಲಿ ನಿಷೇಧ ಮಾಡಲಾಗಿತ್ತು ಮತ್ತು ತಮಿಳುನಾಡಿನಲ್ಲಿ ಚಿತ್ರಮಂದಿರಗಳೇ ಪ್ರದರ್ಶನ ಮಾಡುವುದಿಲ್ಲ ಎಂದು ಹೇಳಿತ್ತು. ನಂತರ ದಿ ಕೇರಳ ಸ್ಟೋರಿ ಸಿನಿಮಾದ ನಿರ್ದೇಶಕರು ಸುಪ್ರೀಂ ಮೆಟ್ಟಿಲೇರಿದ್ದರು, ಈ ಅರ್ಜಿ ವಿಚಾರಣೆ ಮಾಡಿದ ಸುಪ್ರೀಂ ಈ ಬಗ್ಗೆ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದರು, ಈ ಸಿನಿಮಾವನ್ನು ನಿಷೇಧ ಯಾಕೆ ಮಾಡಬೇಕು ಎಂದು ನೋಟಿಸ್ ನೀಡಿತ್ತು. ಆದರೆ, ಇದಕ್ಕೆ ಪಶ್ಚಿಮ ಬಂಗಾಳ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ, ಆದರೆ ತಮಿಳುನಾಡು ಸರ್ಕಾರ, ಇದು ಚಿತ್ರಮಂದಿರದ ವ್ಯವಸ್ಥಾಪಕರೇ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಚಿತ್ರಮಂದಿರಕ್ಕೆ ಜನ ಬರದ ಕಾರಣ ಮತ್ತು ಈ ಸಿನಿಮಾದಲ್ಲಿ ಯಾವುದೇ ಜನಪ್ರಿಯ ನಾಯಕರು ಇಲ್ಲ ಎಂಬ ಕಾರಣಕ್ಕೆ ತಮಿಳುನಾಡಿನಲ್ಲಿ ಜನ ಬರುತ್ತಿಲ್ಲ ಎಂದು ಹೇಳಿದೆ. ಆದರೆ ಇದೀಗ ಸುಪ್ರೀಂ ಸಿನಿಮಾ ನಿಷೇಧ ಮಾಡುವಂತಿಲ್ಲ, ಇದು ಯಾವುದೇ ಸಂಸ್ಕೃತಿ ಮತ್ತು ಭಾವನೆಗೆ ಧಕ್ಕೆ ಮಾಡುವಂತಿಲ್ಲ ಎಂದು ಹೇಳಿದೆ. ಇನ್ನೂ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಥಿಯೇಟರ್‌ಗಳಿಗೆ ಭದ್ರತೆ ನೀಡಲು ಸುಪ್ರೀಂ ಸೂಚನೆ ನೀಡಿದೆ.
[vc_row][vc_column]
BREAKING NEWS
- ‘ಕಟೀಲ್, ಬೊಮ್ಮಾಯಿ ಅವರೇ ನಿಮ್ಮ ಮನೆಗೂ ಕರೆಂಟ್ ಫ್ರೀ’ ಎಂದ ಕಾಂಗ್ರೆಸ್!
- 2022-23ನೇ ಸಾಲಿನಲ್ಲಿ ಪದವಿ ಪಡೆದ ನಿರುದ್ಯೋಗಿ ಯುವಕ- ಯುವತಿಯರಿಗೆ ‘ಯುವನಿಧಿ’ ಭಾಗ್ಯ ಜಾರಿ ಮಾಡಿದ ಸಿದ್ದು ಸರ್ಕಾರ
- ಮಂಗಳೂರು: ನಗರಾಭಿವೃದ್ದಿ ಪ್ರಾಧಿಕಾರದ ಸಿಬ್ಬಂದಿ ಆತ್ಮಹತ್ಯೆ
- ಗೃಹಲಕ್ಷ್ಮಿ ಯೋಜನೆ: ಅರ್ಜಿ ಸಲ್ಲಿಸುವುದು ಹೇಗೆ? ಬೇಕಾದ ದಾಖಲೆಗಳೇನು? ಕೊನೆ ದಿನಾಂಕದ ಮಾಹಿತಿ
- ಉಚಿತ ಬಸ್ ಯೋಜನೆ – ಜೂನ್ 11 ರಿಂದ ಉಚಿತ ಬಸ್ ಪ್ರಯಾಣ
- ಗ್ಯಾರೆಂಟ್ ಜಾರಿ: ಜು.1ರಿಂದ 200 ಯುನಿಟ್ ಉಚಿತ ವಿದ್ಯುತ್, ಎಪಿಎಲ್ ಗೂ ಗೃಹಲಕ್ಷ್ಮಿ
- ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟ ಪ್ರಕರಣ: ಅಪರಾಧಿ ಆದಿತ್ಯ ರಾವ್ ನಿಂದ ಜೈಲಿನಲ್ಲಿ ದಾಂಧಲೆ..!
- ಈ ಆರ್ಥಿಕ ವರ್ಷದಲ್ಲಿ ಎಲ್ಲಾ ಐದೂ ಗ್ಯಾರಂಟಿ ಜಾರಿ: ಷರತ್ತು ಅನ್ವಯ- ಸಿಎಂ
- ಕಡಬ: ಮನೆ ಮೇಲ್ಛಾವಣಿಯಿಂದ ಬಿದ್ದು ಕಾರ್ಮಿಕ ಮೃತ್ಯು
- ಡಿಕೆಶಿ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಸಿಬಿಐ ತನಿಖೆ ತಡೆಯಾಜ್ಞೆ ವಿಸ್ತರಣೆ