ಬೆಂಗಳೂರು: ಹಿಂಬದಿಯಿಂದ ಕಾರೊಂದು ಬಿಎಂಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರೊಂದು ಸುಟ್ಟು ಕರಕಲಾದ ಘಟನೆ ಬೆಂಗಳೂರಿನ ನಾಗರಬಾವಿ ಔಟರ್ ರಿಂಗ್‌ರಿಂಗ್ ರೋಡ್ ಬಳಿ ನಡೆದಿದೆ.
ಕಾರು ಡಿಕ್ಕಿ ಹೊಡೆದ ರಭಸಕ್ಕೆ, ಬಾನೆಟ್‌ನಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಕಾರು ಚಾಲಕ ಕಾರಿನಿಂದ ಹೊರಬಂದಿದ್ದಾನೆ. ಬಸ್ ಹಿಂಬದಿಗೂ ಬೆಂಕಿ ತಗುಲಿದೆ. ಸ್ಥಳೀಯರ ಸಹಾಯದಿಂದ ಬಸ್ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.