ಬೆಂಗಳೂರು : ಇಂದು ಮಧ್ಯಾಹ್ನ 3.30 ಕ್ಕೆ ಚನ್ನಪಟ್ಟಣ ಉಪಚುನಾವಣೆಗೆ NDA ಅಭ್ಯರ್ಥಿಯನ್ನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಹೆಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ ವೈ ನಿವಾಸದಲ್ಲಿ NDA ಅಭ್ಯರ್ಥಿಯನ್ನ ಘೋಷಣೆ ಮಾಡಲಿದ್ದಾರೆ. ಚನ್ನಪಟ್ಟಣ ಕ್ಷೇತ್ರಕ್ಕೆ NDA ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ಕೊನೆಗೂ ಇಂದು ಮಧ್ಯಾಹ್ನ 3.30 ಕ್ಕೆ ತೆರೆ ಬಿಳಲಿದೆ. ಸಿಪಿ ಯೋಗೇಶ್ವರ್ ಮೈತ್ರಿ ಪಕ್ಷದಿಂದ ದೂರ ಸರಿದು ಕಾಂಗ್ರೆಸ್ ಅಭ್ಯರ್ಥಿಯಾದ ನಂತರ NDA ಅಭ್ಯರ್ಥಿಯಾಗಿ ಯಾರನ್ನ ಕಣಕ್ಕಿಳಿಸಬೇಕು ಎಂದು ಜೆಡಿಎಸ್ ಗೊಂದಲಕ್ಕಿಡಾಗಿತ್ತು. ಸಾಕಷ್ಟು ಸಭೆ ಚರ್ಚೆಗಳ ಬಳಿಕ ಇಂದು ಬಿಜೆಪಿ ಜೆಡಿಎಸ್ ನಾಯಕರ ಸಮ್ಮುಖದಲ್ಲಿ ಅಭ್ಯರ್ಥಿ ಘೋಷಣೆಯಾಗುತ್ತಿದೆ. ಮೂಲಗಳ ಪ್ರಕಾರ ನಿಖಿಲ್ ಕುಮಾರಸ್ವಾಮಿಯೇ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಇಂದು ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲೂ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಡ ಹಾಕಿದ್ದ ಕಾರ್ಯಕರ್ತರು. ನಿಖಿಲ್ ಜೊತೆ ಚನ್ನಪಟ್ಟಣ ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು ಹೆಸರು ಸಹ ಕೇಳಿಬಂದಿತ್ತು ಆದ್ರೆ ಅಂತಿಮವಾಗಿ ಯಾರನ್ನ ಅಭ್ಯರ್ಥಿಯಾಗಿ ಮಾಡ್ತಾರೆ ಅನ್ನೋದು ಇನ್ನೊಂದು ಗಂಟೆಯಲ್ಲಿ ಸ್ಪಷ್ಟವಾಗಿ ತಿಳಿಯಲಿದೆ.