ಬಿಗ್ ಬಾಸ್ ಕನ್ನಡ ಸೀಸನ್ 11ರ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ನಡುವೆ ರಾಜಾ ರಾಣಿ ಶೋನ ಗ್ರ್ಯಾಂಡ್ ಫಿನಾಲೆಯಲ್ಲಿ ಒಬ್ಬೊಬ್ಬ ಸ್ಪರ್ಧಿಯನ್ನು ಬಹಿರಂಗಗೊಳಿಸಲಾಗುತ್ತಿದೆ. ಆ ಪೈಕಿ ಈಗಾಗಲೇ ಸತ್ಯ ಸೀರಿಯಲ್ ನಟಿ ಗೌತಮಿ ಜಾಧವ್ ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸದಲಿದ್ದಾರೆ.
ಆದರೆ, ಅವರು ಸ್ವರ್ಗಕ್ಕಾ? ಅಥವಾ ನರಕಕ್ಕಾ? ಎಂಬ ಕುತೂಹಲಕ್ಕೆ ಭಾನುವಾರ ಸಂಜೆ ವೇಳೆ ಗೊತ್ತಾಗಲಿದೆ. ಇನ್ನು ಎರಡನೇ ಸ್ಪರ್ಧಿ ಬಾಯಲ್ಲಿ ಬೆಂಕಿ ಉಂಡೆ ಉರುಳಿಸುವ ವಕೀಲ. ಬಿಗ್ಬಾಸ್ ಮನೆಯ ಇತಿಹಾಸ ಗಮಿಸಿದರೆ ಹೀಗೆ ಜೋರಾಗಿ ಕಿರುಚಾಡುವ, ಜಗಳವಾಡುವ, ಇನ್ನೊಬ್ಬರನ್ನು ದೂಷಿಸಿ, ತಂತ್ರ-ಕುತಂತ್ರದ ಆಟ ಆಡುವ ಸ್ಪರ್ಧಿಗಳು ಗೆದ್ದಿಲ್ಲ. ಆದರೆ ಕೊನೆಯವರೆಗೂ ಉಳಿದುಕೊಳ್ಳುತ್ತಾರೆ. ಹೊರಗಡೆ ಹೆಸರು ಮಾಡುತ್ತಾರೆ. ಹಾಗಾಗಿ ಬಿಗ್ಬಾಸ್ ಪ್ರತಿಬಾರಿ ಇಂಥಹಾ ವ್ಯಕ್ತಿಗಳನ್ನು ಆರಿಸಿ ಬಿಗ್ಬಾಸ್ ಮನೆ ಒಳಗೆ ಕಳಿಸುತ್ತದೆ. ಈ ಬಾರಿಯಂತೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ದೊಡ್ಡ ಬಾಯಿಯಿಂದ, ಜಗಳ ಮಾಡಿಕೊಳ್ಳುವ ವ್ಯಕ್ತಿತ್ವದಿಂದಲೇ ಚಿರಪರಿಚಿತರಾದ ವ್ಯಕ್ತಿಯನ್ನು ಬಿಗ್ಬಾಸ್ ಮನೆಯ ಒಳಗೆ ಕಳಿಸುತ್ತಿದೆ. ‘ಫೇಸ್ಬುಕ್ ಲಾಯರ್’ ಎಂದು ಟೀಕಾಕಾರರಿಂದ ಕರೆಸಿಕೊಳ್ಳುವ, ತಮ್ಮ ವಕೀಲಿಕೆಗಿಂತಲೂ ಸಾಮಾಜಿಕ ಜಾಲತಾಣದಿಂದ ಭಾರಿ ಹೆಸರು ಮಾಡಿರುವ ವಕೀಲ ಜಗದೀಶ್ ಅವರನ್ನು ಬಿಗ್ಬಾಸ್ ಮನೆಗೆ ಎರಡನೇ ಸ್ಪರ್ಧಿಯಾಗಿ ಕಳಿಸಲಾಗುತ್ತಿದೆ. ಲಾಯರ್ ಜಗದೀಶ್ರದ್ದು ವರ್ಣಮಯ ವ್ಯಕ್ತಿತ್ವ ಮಾತ್ರವಲ್ಲ, ಅವರದ್ದು ಬಹಳ ವರ್ಣಮಯ ವೈಯಕ್ತಿಕ ಜೀವನ ಸಹ. ಬಿಗ್ಬಾಸ್ಗೆ ಹೇಳಿ ಮಾಡಿಸಿದ ವ್ಯಕ್ತಿ ಜಗದೀಶ್. ಸಿಟ್ಟಿನ ವ್ಯಕ್ತಿತ್ವದ ಜಗದೀಶ್, ಮಾತುಗಾರ. ಏಕವಚನ, ಅಶ್ಲೀಲ ಪದಗಳು ಅವರಿಗೆ ತೀರಾ ಸಾಮಾನ್ಯ ಎಂಬುದು ಅವರ ಸಾಮಾಜಿಕ ಜಾಲತಾಣ ವಿಡಿಯೋ ನೋಡಿದರೆ ತಿಳಿಯುತ್ತದೆ. ಅಂದಹಾಗೆ ಜಗದೀಶ್ಗೆ ಮದುವೆಯಾಗಿದ್ದು ಆದರೆ ಅವರಿಗೆ ಡಿವೋರ್ಸ್ ಆಗಿದ್ದು, ಪತ್ನಿ ಹಾಗೂ ಮಗ ಅವರಿಂದ ದೂರ ಇದ್ದಾರೆ.