ಚಿತ್ರದುರ್ಗ: ಬಿಜೆಪಿ ಯಾವತ್ತೂ ಮಹಾತ್ಮ ಗಾಂಧೀಜಿ ಅವರನ್ನು ಒಪ್ಪಿಲ್ಲ ಬಿಜೆಪಿಯವರು ಸುಮ್ಮನೆ ಶೋ ಮಾಡುತ್ತಾರೆ. ಮೋದಿ ಅವರು ಚರಕ ಹಿಡಿದು ಫೋಸ್ ಕೊಟ್ಟರು. ಬೇರೆ ದೇಶಕ್ಕೆ ಹೋದಾಗ ಗಾಂಧೀಜಿ ಬಗ್ಗೆ ಭಾಷಣ ಮಾಡುತ್ತಾರೆ ಎಂದು ಕಾರ್ಮಿಕ ಸಚಿವ ಎಸ್.ಸಂತೋಷ ಲಾಡ್ ಪ್ರಧಾನ ಮಂತ್ರಿ ಮೋದಿಯವರ ವಿರುದ್ದ ಕಿಡಿ ಕಾರಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಅವರನ್ನು ಬೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೆನಡಾ, ಸಿಂಗಾಪುರ, ಯುಕೆ ದೇಶದ ಜನರಿಗೆ ನೋಟಿಸ್ ದೆಹಲಿ, ಭಾರತಕ್ಕೆ ಹೋಗಬೇಡಿ ಎಂದು ಅಲರ್ಟ್ ನೋಟಿಸ್ ನೀಡುತ್ತಿವೆ. ಪ್ರಧಾನಿ ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಇಂಥ ವಿಚಾರ ಬಿಟ್ಟು ವಂದೇ ಮಾತರಂ ಬಗ್ಗೆ ಮಾತಾಡುವ ಬುದ್ಧಿವಂತಿಕೆ.ಮಹಾತ್ಮಾ ಗಾಂಧಿ ನಿಮಗೆ.ನಮಗೆ ಇಂಪಾರ್ಟೆಂಟ್.ಬಿಜೆಪಿ ಅವರಿಗೆ ಮಹಾತ್ಮ ಗಾಂಧಿ ಇಂಪಾರ್ಟೆಂಟ್ ಅಲ್ಲ ಎಂದರು.
ಬಿಜೆಪಿ ಯಾವತ್ತೂ ಮಹಾತ್ಮ ಗಾಂಧಿ ಅವರನ್ನು ಒಪ್ಪಿಲ್ಲ… ಬಿಜೆಪಿಯವರು ಸುಮ್ಮನೆ ಶೋ ಮಾಡುತ್ತಾರೆ.ಮೋದಿ ಅವರು ಚರಕ ಹಿಡಿದು ಫೋಸ್ ಕೊಟ್ಟರು.ಬೇರೆ ದೇಶಕ್ಕೆ ಹೋದಾಗ ಗಾಂಧೀಜಿ ಬಗ್ಗೆ ಭಾಷಣ ಮಾಡುತ್ತಾರೆ. ನರೇಗಾ ಹೆಸರು ಬದಲಾವಣೆ ವಿರೋಧಿಸಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ…ಯುಪಿಎ ಕಾರ್ಯಕ್ರಮದ ಹೆಸರು ಬದಲಾವಣೆ ಮಾಡಿದ್ದಾರೆ ಎನ್ಡಿಎಯಿಂದ ಹೊಸ ಕಾರ್ಯಕ್ರಮಗಳು ನಡೆದಿಲ್ಲ ಎಂದು ದೂರಿದರು.
ನಮಗೆ ಯಾರು ಹೈಕಮಾಂಡ್ ಎಂದು ಗೊತ್ತಿದೆ. ಬೇರೆಯವರಿಂದ ತಿಳಿಸಿಕೊಳ್ಳುವ ಅಗತ್ಯ ಇಲ್ಲವಾಗಿದೆ ಮಾಜಿ ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಲ್ಲ ಎಂದ ಅವರು ರಾಜ್ಯ ಅಭಿವೃದ್ಧಿ ನಿಷ್ಕ್ರಿಯ ಎಂದು ಬಿ.ವೈ ವಿಜಯೇಂದ್ರರವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ದೆಹಲಿಯಲ್ಲಿ ವಾತಾವರಣ ಹೇಗಿದೆ ಈಗ ಎಂದು ಪ್ರಶ್ನಿಸಿದರು.
































