ಬೆಂಗಳೂರು: ಬಿಬಿಎಂಪಿ ಕಚೇರಿಯ ಗುಣ ನಿಯಂತ್ರಣ ಲ್ಯಾಬ್ ನಲ್ಲಿ ಬೆಂಕಿ ಬಿದ್ದ ಪ್ರಕರಣ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಸದ್ಯ ಪ್ರಕರಣವನ್ನು ತನಿಖೆ ಮಾಡುತ್ತಿದ್ದೇವೆ .ಅಲ್ಲಿನ ದಾಖಲೆಗಳಿಗೆ ಯಾವುದೇ ತೊಂದರೆಯಾಗಿಲ್ಲ.ರಾತ್ರಿಯೇ ಎಲ್ಲಾ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇವೆ .ಲ್ಯಾಬ್ ಸ್ಥಳಾಂತರದ ಬಗ್ಗೆಯೂ ಹೇಳಿದ್ದೇನೆ. ಯಾವ ಜಾಗದಲ್ಲಿ ಕ್ವಾಲಿಟಿ ಕಂಟ್ರೋಲ್ ನ ಇಟ್ಟಿದ್ರೋ ಆ ಜಾಗ ಸರಿಯಿಲ್ಲ.ಈ ಬಗ್ಗೆ ತನಿಖೆ ನಡೆಸಲು ಹೇಳಿದ್ದೀನಿ.ಕಾಂಗ್ರೆಸ್ ಟ್ವೀಟ್ ನಲ್ಲಿ ಬಿಜೆಪಿ ಮೇಲೆ ಆರೋಪ ವಿಚಾರಕ್ಕೆ ಯಾವ ಹುಡುಗ್ರು ಮಾಡಿದ್ದಾರೋ. ನಾನು ಸಿಟಿಯಲ್ಲಿ ಇರಲಿಲ್ಲ. ಮೊದಲು ನಾನೇ ಚೆಕ್ ಮಾಡ್ತಿದ್ದೆ.ಈಗ ವಾಪಾಸ್ ತಗೊಂಡಿದ್ದಾರೆ ಅಂತ ಡಿ ಕೆ ಶಿವಕುಮಾರ್ ಹೇಳಿದ್ದಾರೆ.