ಬೆಂಗಳೂರು: ಬೆಂಗಳೂರಿಗರಿಗೆ ಶೀಘ್ರದಲ್ಲಿ ಆಟೋ ದರದ ಬಿಸಿ ತಟ್ಟಲಿದೆ. ಪ್ರಯಾಣ ದರ ಹೆಚ್ಚಿಸುವಂತೆ ಬೆಂಗಳೂರು ಆಟೋ ಚಾಲಕರಿಂದ ಈಗಾಗಲೇ ಪತ್ರ ಬರೆಯಲಾಗಿದೆ. 2 ಕಿಲೋ ಮೀಟರ್ಗೆ ₹30 ರ ಬದಲು ₹40 ಹೆಚ್ಚಿಸುವಂತೆ ಪತ್ರ ಬರೆಯಲಾಗಿದೆ. ಬಿಡಿ ಭಾಗಗಳ ಬೆಲೆ ಕೂಡ ಏರಿಕೆಯಾಗಿದೆ. ದಿನಬಳಕೆಯ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದೆ.ಮೀಟರ್ ದರ ಹೆಚ್ಚು ಮಾಡುವಂತೆಯೂ ಮನವಿ ಮಾಡಿದ್ದಾರೆ. ಮೀಟರ್ ದರ ಏರಿಕೆ ಮಾಡದಿದ್ರೆ ಗ್ಯಾಸ್ ದರ ಇಳಿಸಿ ಇಂಧನ ಬಿಡಿ ಭಾಗಗಳ ರೇಟ್ ಕಡಿಮೆ ಮಾಡಿ ಈ ದುಡ್ಡಲ್ಲಿ ನಾವು ಜೀವನ ನಡೆಸೆದೋದು ಹೇಗೆಂದು ಚಾಲಕರು ಪತ್ರದ ಮೂಲಕ ಅಳಲು ತೋಡಿಕೊಂಡಿದ್ದಾರೆ.
