ಬೆಂಗಳೂರು: 34 ದಿನಗಳ ನಂತರ ದೇಶಕ್ಕೆ ಹಾಜರಾಗ್ತಿರೋ ಪ್ರಜ್ವಲ್ ರೇವಣ್ಣ ಇಂದು ಮಧ್ಯರಾತ್ರಿ ಬೆಂಗಳೂರಿಗೆ ಕಾಲಿಡಲಿದ್ದಾರೆ. ಒಂದು ವೇಳೆ ಪ್ರಜ್ವಲ್ ವಾಪಸ್ ಆದ್ರೆ ಹೇಗಿರುತ್ತೆ ಅಂತ ನೋಡೋದಾದ್ರೆ… ಮೊದಲಿಗೆ ಏರ್ ಪೋರ್ಟ್ ನಲ್ಲಿ ಪ್ರಜ್ವಲ್ ವಿಮಾನ ಇಳಿತಿದ್ದಂತೆ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ಆ ಬಳಿಕ ಸಿಐಡಿ ಎಸ್‌ಐಟಿ ಕಚೇರಿಗೆ ಕರೆತರಲಿರುವ ಅಧಿಕಾರಿಗಳು ಅರೆಸ್ಟ್ ಪ್ರೊಸೀಜರ್ ಮುಗಿಸಿ ನಾಳೆ ವೈದ್ಯಕೀಯ ತಪಾಸಣೆ ನಡೆಸಿ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಮಧ್ಯಾಹ್ನದ ವೇಳೆ ಎಸಿಎಂಎಂ 42ರ ನ್ಯಾಯಾಧೀಶರ ಮುಂದೆ ಪ್ರಜ್ವಲ್ ಹಾಜರುಪಡಿಸಲಿದ್ದಾರೆ. ಪ್ರಜ್ವಲ್ ಮೇಲಿರುವ ಗಂಭೀರ ಕೇಸ್‌ಗಳ ವಿಚಾರಣೆಗಾಗಿ ಪೊಲೋಸ್ ಕಸ್ಟಡಿಗೆ ಕೇಳಲು ಮನವಿ ಮಾಡಿಕೊಳ್ಳೋ ಸಾಧ್ಯತೆ ಹೆಚ್ಚಾಗಿದ್ದು, ಪೊಲೀಸ್ ಕಸ್ಟಡಿಗೆ ಪಡೆದು ಮತ್ತೆ ಪ್ರಜ್ವಲ್‌ನ ಸಿಐಡಿ ಕಚೇರಿಗೆ ಕರೆತಂದು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಾರೆ. ಪೊಲೀಸ್ ಕಸ್ಟಡಿಯಲ್ಲಿ ಇದ್ದಷ್ಟು ದಿನ ಸ್ಪಾಟ್ ಮಹಜರ್, ಎವಿಡೆನ್ಸ್ ವಿಚಾರವಾಗಿ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.