ಬೆಂಗಳೂರು:ಕುಡಿದು ವಾಹನ ಚಲಾಯಿಸುವವರ ವಿರುದ್ಧ ನಗರ ಸಂಚಾರ ಪೊಲೀಸರು ಗರಂ ಆಗಿದ್ದಾರೆ. ಒಂದೇ ದಿನದಲ್ಲಿ 200 ಪ್ರಕರಣ ದಾಖಲಿಸಿದ್ದಾರೆ.
ಯಾರೂ ಮದ್ಯಪಾನ ಮಾಡಿ ವಾಹನ ಚಲಾಯಿಸದಂತೆ ನೋಡಿಕೊಳ್ಳಲು ಕ್ರಮವಹಿಸಿದ್ದೇವೆ ಎಂದು ದಕ್ಷಿಣ ವಿಭಾಗದ ಸಂಚಾರ ಪೊಲೀಸ್ ಉಪ ಪೊಲೀಸ್ ಆಯುಕ್ತ ಶಿವಪ್ರಕಾಶ್ ದೇವರಾಜು ಹೇಳಿಕೆ ನೀಡಿದ್ದಾರೆ.
ಮದ್ಯಪಾನ ಮಾಡಿದ ಚಾಲಕರು ಮತ್ತು ಸವಾರರ ವಿರುದ್ಧ 201 ಪ್ರಕರಣಗಳು ದಾಖಲಾಗಿವೆ. ಟ್ರಾಫಿಕ್ ಪೊಲೀಸರು ನಗರಾದ್ಯಂತ ಬೀಡುಬಿಟ್ಟಿದ್ದು, ತಪಾಸಣೆ ನಡೆಸುತ್ತಿದ್ದಾರೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ
				
															
                    
                    
                    
                    
                    
































