ಬೆಂಗಳೂರು: ಎಂಎಲ್‌ಎ ಟಿಕೆಟ್‌ಗೆ ಆಸೆ ಬಿದ್ದು ಬಹುಕೋಟಿ ವಂಚನೆಗೊಳಗಾಗಿದ್ದ ಉದ್ಯಮಿ ಗೋವಿಂದಬಾಬು ಪೂಜಾರಿ ವಿರುದ್ಧ ಇಡಿಗೆ ದೂರು ನೀಡಲಾಗಿದೆ. ದೂರದಾರನಿಗೆ 5 ಕೋಟಿ ಹಣ ಎಲ್ಲಿಂದ ಬಂದಿದೆ ಎಂಬ ಬಗ್ಗೆ ತನಿಖೆ ನಡೆಸುವಂತೆ ವಕೀಲರೊಬ್ಬರು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ. ಬಹುಕೋಟಿ ವಂಚನೆ ಪ್ರಕರಣದ ದೂರುದಾರ ಗೋವಿಂದ ಬಾಬು ಪೂಜಾರಿ ತಮ್ಮ ದೂರಿನಲ್ಲೇ ಉಲ್ಲೇಖ ಮಾಡಿರುವಂತೆ 5 ಕೋಟಿ ನಗದು ಹಣವನ್ನು ನೀಡಿರುವುದಾಗಿ ಉಲ್ಲೇಖಿಸಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಹಣವನ್ನ ಹವಾಲ ಮಾರ್ಗದಿಂದ ಬಂದಿರುವ ಅನುಮಾನ ವ್ಯಕ್ತ ಪಡಿಸಿರೋ ವಕೀಲ ನಟರಾಜ್ ಶರ್ಮಾ ಅವರು, ಗೋವಿಂದ ಪೂಜಾರಿ ವಿರುದ್ಧ ಇಡಿಗೆ ದೂರು ನೀಡಿದ್ದು ಈ ಪ್ರಕರಣವನ್ನ ಇಡಿ ತನಿಖೆ ಮಾಡಿ ಹಣದ ಬಗ್ಗೆ ವಿಚಾರಣೆ ನಡೆಸಬೇಕು ಎಂದಿದ್ದಾರೆ. ಬ್ಯಾಂಕ್‌ನಿಂದ ಸಾಲವಾಗಿ ಪಡೆದ ಹಣವನ್ನು ಹೀಗೆ ಬಳಿಸಿಕೊಳ್ಳುವುದು ಸಹ ತಪ್ಪು. ಅವರು ಮುಂಬೈನಲ್ಲಿ ಉದ್ಯಮ ಮಾಡೋದ್ರಿಂದ ಇದು ಹವಾಲ ವಹಿವಾಟು ಅಂತ ಅನುಮಾನವನ್ನು ವಕೀಲರು ವ್ಯಕ್ತ ಪಡಿಸಿದ್ದು, ಈ ಸಂಬಂಧ ಇಂದು ಇಡಿಗೆ ದೂರು ನೀಡಿದ್ದಾರೆ.
![](https://bcsuddi.com/wp-content/uploads/2025/02/WhatsApp-Image-2025-02-05-at-6.18.34-PM.jpeg)