Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಭಾರತದ ಬಳಿಕ ಚಂದ್ರನೆಡೆಗೆ ನೌಕೆ ಕಳುಹಿಸಿದ ರಷ್ಯಾ – ಫಸ್ಟ್ ಲ್ಯಾಂಡಿಂಗ್‌ ಯಾವುದು?

0

ಮಾಸ್ಕೋ: ಭಾರತವು ಕಳೆದ ತಿಂಗಳು ಚಂದ್ರಯಾನ-3 ಉಡಾವಣೆ ಮಾಡಿದ್ದು, ಇದರ ಬೆನ್ನಲ್ಲೇ ಇದೀಗ ರಷ್ಯಾ ಸುಮಾರು 50 ವರ್ಷಗಳ ಬಳಿಕ ಮೊದಲ ಬಾರಿ ಚಂದ್ರನೆಡೆಗೆ ತನ್ನ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದ್ದು, ಮೊದಲು ಯಾವುದು ಲ್ಯಾಂಡ್ ಆಗಲಿದೆ ಎಂಬ ಕೂತುಹಲ ಹೆಚ್ಚಿದೆ.

ಲೂನಾ-25 ಪ್ರೋಬ್ ಎಂಬ ನೌಕೆ ಅನ್ನು ಹೊತ್ತ ರಾಕೆಟ್ ಗುರುವಾರ ಸ್ಥಳೀಯ ಕಾಲಮಾನ 02:10 ವೇಳೆಗೆ ವೊಸ್ಟೊಚ್ನಿ ಕಾಸ್ಮೊಡ್ರೋಮ್‌ನಿಂದ ಉಡಾವಣೆಯಾಗಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ತಿಳಿಸಿದೆ.

ಇನ್ನು ಈ ಉಪಗ್ರಹ ಆಗಸ್ಟ್ 21ರ ವೇಳಗೆ ಚಂದ್ರನ ಮೇಲೆ ಇಳಿಯುವ ಸಾಧ್ಯತೆಯಿದ್ದು, ಈ ನೌಕೆ 5 ದಿನಗಳಲ್ಲಿ ಚಂದ್ರನ ಕಕ್ಷೆಯನ್ನು ತಲುಪಲಿದೆ.

ಇತಿಹಾಸದಲ್ಲಿ ಮೊದಲ ಬಾರಿಗೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಲೂನಾ-25 ಇಳಿಯಲಿದ್ದು, ಇಲ್ಲಿಯವರೆಗೆ ಚಂದ್ರನ ಮೇಲೆ ನಡೆಸಲಾಗಿರುವ ಎಲ್ಲಾ ಕಾರ್ಯಾಚರಣೆಗಳು ಸಮಭಾಜಕ ವಲಯದಲ್ಲಿ ಇಳಿದಿವೆ ಎಂದು ಹಿರಿಯ ರೋಸ್ಕೊಸ್ಮಾಸ್ ಅಧಿಕಾರಿ ಅಲೆಕ್ಸಾಂಡರ್ ಬ್ಲೋಖಿನ್ ಹೇಳಿದ್ದಾರೆ.

Leave A Reply

Your email address will not be published.