ಹವಾಮಾನ ಬದಲಾವಣೆಯಿಂದ ದ.ಕ.ದ ಮಂಗಳೂರು & ಉಡುಪಿಯ ಕರಾವಳಿ ತೀರದುದ್ದಕ್ಕೂ ವರ್ಷದಿಂದ ವರ್ಷಕ್ಕೆ ಕಡಲ್ಕೊರೆತ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಇತ್ತೀಚೆಗೆ ಆತಂಕಕಾರಿ ಅಧ್ಯಯನ ವರದಿಯೊಂದು ಪ್ರಕಟವಾಗಿದ್ದು 2040ರ ವೇಳೆಗೆ ಉಭಯ ನಗರಗಳಲ್ಲಿ ಶೇ.5ರಷ್ಟು ಭೂಮಿ ಸಮುದ್ರ ಪಾಲಾಗುವ ಸಂಭವವಿದೆ ಎಂದು ಎಚ್ಚರಿಸಿದೆ.
ಬೆಂಗಳೂರು ಮೂಲದ ಥಿಂಕ್ಟ್ಯಾಂಕ್ “ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸಸ್’ ಈ ವರದಿ ಪ್ರಕಟಿಸಿದ್ದು ಮಂಗಳೂರಿನಲ್ಲಿ ಸಮುದ್ರ ನೀರಿನ ಮಟ್ಟ 75.1 ಸೆಂ.ಮೀಟರ್&ಉಡುಪಿಯಲ್ಲಿ 75.2 ಸೆಂ.ಮೀಟರ್ ಏರಿಕೆಯಾಗಲಿದೆ ಎಂದು ಭವಿಷ್ಯ ನುಡಿದಿದೆ.


































