[vc_row][vc_column]
BREAKING NEWS
- ‘ನೈತಿಕ ದಿವಾಳಿತನದ ಸಾರಾಯಿ ಗ್ಯಾರೆಂಟಿ ಸರ್ಕಾರ’ – ಬೊಮ್ಮಾಯಿ ಕಿಡಿ
- ‘ಸಂಪುಟ ಸಭೆಯಲ್ಲಿ ಮೋಡ ಬಿತ್ತನೆಗೆ ಚರ್ಚೆ’: ಡಿಸಿಎಂ ಡಿ.ಕೆ.ಶಿವಕುಮಾರ್
- ನಿಯಮ ಉಲ್ಲಂಘನೆ ಮಾಡಿಯೂ ಟ್ರಾಫಿಕ್ ಪೊಲೀಸರಿಗೆ ಯುವತಿಯಿಂದ ಅವಾಜ್!
- ‘ಕಾವೇರಿ ನೆಪದಲ್ಲಿ ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಮಾಡುತ್ತಿದೆ’- ಸಿದ್ದರಾಮಯ್ಯ
- ಭಾರತೀಯ ವಾಯುಪಡೆಗೆ C-295 ಸರಕು ವಿಮಾನ ಸೇರ್ಪಡೆ
- ವಿಶಾಖಪಟ್ಟಣಂ ಮೃಗಾಲಯದಲ್ಲಿ 18 ವರ್ಷದ ಸಿಂಹಿಣಿ ಹೃದಯಾಘಾತದಿಂದ ಸಾವು
- ‘ಶಾಂತಿಯುತ ಹೋರಾಟಕ್ಕೆ ಸರ್ಕಾರ ಅಡಚಣೆ ಮಾಡಲ್ಲ’: ಡಿಕೆಶಿ
- ಕಾವೇರಿ ನೀರು ವಿವಾದ: ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ದೇವೇಗೌಡ
- ಇಂದು ಮೊದಲ ಬಾರಿಗೆ ಇಡೀ ರಾಜ್ಯದಾದ್ಯಂತ ಏಕ ಕಾಲಕ್ಕೆ “ಜನತಾ ದರ್ಶನ”
- ‘ನನ್ನ ವಿರುದ್ಧ ಹೈದರ್ಬಾದ್ನಲ್ಲಿ ಸ್ಪರ್ಧಿಸಿ ‘- ರಾಹುಲ್ಗೆ ಓವೈಸಿ ಸವಾಲು
ಮಂಗಳೂರು : ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮುಳಿಹಿತ್ಲುವಿನ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಯುವಕನೋರ್ವ ಬರ್ಬರವಾಗಿ ಕೊಲೆಯಾಗಿದ್ದಾನೆ.
ಜಗ್ಗು (35) ಕೊಲೆಯಾದ ಯುವಕನಾಗಿದ್ದು ಆರೋಪಿ ತೌಸಿಫ್ ಹುಸೈನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ ಬೆಳಗ್ಗೆ ತನ್ನ ಸ್ಟೋರಿನಲ್ಲಿ ಕೆಲಸಕ್ಕಿದ್ದ ಜಗ್ಗುವನ್ನು ಕ್ಷುಲ್ಲಕ ಕಾರಣಕ್ಕೆ ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಬೆಂಕಿ ಕೊಟ್ಟು ಸುಟ್ಟು ನಂತರ ಸಾಕ್ಷಿ ನಾಶ ಮಾಡುವ ಹಾಗೂ ಪ್ರಕರಣದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಅಪರಾಹ್ನ 1.30 ರ ಸುಮಾರಿಗೆ ಅಂಗಡಿಯ ಸುತ್ತಮುತ್ತಲಿನ ಸಾರ್ವಜನಿಕರಿಗೆ ವಿದ್ಯುತ್ ಸ್ಪರ್ಶವಾಗಿರುವುದಾಗಿ ತೌಸಿಫ್ ಹೇಳಿದ್ದಾನೆ.
ಕೂಡಲೇ ಸ್ಥಳೀಯರು ಜಗ್ಗುವನ್ನು ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಕರಕೊಂಡು ಹೋದಾಗ ಆದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ನಂತರ ಪ್ರಕರಣ ದಾಖಲು ಮಾಡಿಕೊಂಡ ಪಾಂಡೇಶ್ವರ ಪೊಲೀಸರು ಕೂಲಂಕೂಷವಾಗಿ ತನಿಖೆಯನ್ನು ಆರಂಭಿಸಿದ್ದಾರೆ.