ಚಂಡೀಗಢ: ವಿದ್ಯುತ್ ಅವಘಡದಿಂದ ಮೃತಪಟ್ಟ ಮಗನ ಅಂತಿಮ ದರ್ಶನಕ್ಕೆ ಅವಕಾಶ ನೀಡ ಜಿಎಸ್‌ಟಿ ಅಧಿಕಾರಿಗಳು ತಂದೆಯ ಸಾವಿಗೆ ಕಾರಣರಾಗಿದ್ದಾರೆ! ಬಲ್‌ಬೀರ್ ಸಿಂಗ್ ಎಂಬಾತರೇ ಮೃತಪಟ್ಟ ದುರ್ದೈವಿ. ಟ್ರಕ್ ಚಾಲಕರಾದ ಇವರು ಸರಕುಗಳನ್ನು ತಲುಪಿಸಲು ಕಾನ್‌ಪುರ ನಗರಕ್ಕೆ ತೆರಳಿದ್ದಾರೆ. ವಾಪಸ್ ಬರುವಾಗ ಅವರ ಮಗ ಮಹೇಶ್ ಎಂಬಾತ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಸುದ್ದಿ ಬಂದಿದೆ. ಸುದ್ದಿ ತಿಳಿದು ಕೂಡಲೇ ಅವರು ತಮ್ಮ ಊರು ಪಂಜಾಬ್‌ನ ಲೂಧಿಯಾನ ಸಮೀಪದ ಅಸ್ಲಾಮ್‌ಗಂಜ್‌ಗೆ ತೆರಳಲು ಮುಂದಾಗಿದ್ದಾರೆ. ಆದರೆ ಇದೇ ವೇಳೆ ಅವರನ್ನು ಟ್ರಕ್ ಸಮೇತ ತಡೆದ ರಾಜ್ಯ ಜಿಎಸ್‌ಟಿ ಅಧಿಕಾರಿಗಳು ಬಲ್ಬೀರ್ ಸಿಂಗ್ ಅವರನ್ನು ವಶಕ್ಕೆ ಪಡೆದಿದ್ದಾರೆ. ತನ್ನ ಮಗ ಮೃತಪಟ್ಟಿದ್ದು ಕೂಡಲೇ ಊರಿಗೆ ಹೋಗಬೇಕಿದೆ ಎಂದು ತಿಳಿಸಿದರೂ ಅಧಿಕಾರಿಗಳು ಹೋಗಲು ಅನುಮತಿಸಿಲ್ಲ. ನಂತರ ಅಧಿಕಾರಿಗಳು ಬಲ್ಬೀರ್ ಸಿಂಗ್ ಅವರನ್ನು ಮಧ್ಯರಾತ್ರಿ ವೇಳೆ ತಮ್ಮ ಕಚೇರಿಗೆ ಕರೆದೊಯ್ದಿದ್ದಾರೆ. ದುರ್ದೈವ ಎಂಬಂತೆ ಮಗನ ಸಾವಿನ ಆಘಾತದಲ್ಲಿದ್ದ ಬಲ್ಬೀರ್ ಸಿಂಗ್ ಜಿಎಸ್‌ಟಿ ಕಚೇರಿಯಲ್ಲಿ ಮೃತಪಟ್ಟಿದ್ದಾರೆ. ಇತ್ತ ತಂದೆಯೂ ನಿಧನರಾದ ಸುದ್ದಿ ತಿಳಿದ ಬಲ್ಬೀರ್ ಅವರ ಹಿರಿಯ ಮಗ ಗೋವಿಂದ್ ತಕ್ಷಣ ಕಾನ್‌ಪುರಕ್ಕೆ ಬಂದಿದ್ದಾರೆ. ತನ್ನ ತಂದೆಯ ಶವ ಕಂಡು ರೋಧಿಸಿದ್ದಾರೆ. ತಮ್ಮ ಕುಟುಂಬ ಸರ್ವನಾಶವಾಗಿದೆ. ಇದಕ್ಕೆ ಜಿಎಸ್‌ಟಿ ಅಧಿಕಾರಿಗಳೇ ಕಾರಣ. ಇವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಗೋವಿಂದ್ ಮಾಧ್ಯಮದ ಮುಂದೆ ಹೇಳಿದ್ದಾರೆ.
[vc_row][vc_column]
BREAKING NEWS
- ಪಾಕ್ ನಲ್ಲಿ ಪ್ರಬಲ ಭೂಕಂಪ ಸಾಧ್ಯತೆ : ಭವಿಷ್ಯ ನುಡಿದ ವಿಜ್ಞಾನಿ
- ‘ಜಾತಿಗಣತಿ ವರದಿ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ’- ಸಿಎಂ
- ಶಿವಮೊಗ್ಗದ: ಸೆಕ್ಷನ್ 144 ನಿಷೇಧಾಜ್ಞೆ ಕೊಂಚ ಸಡಿಲಿಸಿದ ಪೊಲೀಸ್ – ಅಗತ್ಯ ವಸ್ತುಗಳ ಖರೀದಿಗೆ ಅವಕಾಶ
- ಹೋಮ್ ವರ್ಕ್ ಮಾಡದಕ್ಕೆ ತಲೆಗೆ ಹೊಡೆದ ಶಿಕ್ಷಕಿ- ಯುಕೆಜಿ ವಿದ್ಯಾರ್ಥಿ ಸಾವು
- ಬೆಂಗಳೂರು: ಬೆಳ್ಳಂಬೆಳಗ್ಗೆ 10ಕ್ಕೂ ಹೆಚ್ಚು ಉದ್ಯಮಿಗಳಿಗೆ ಶಾಕ್ ಕೊಟ್ಟ ಐಟಿ ಅಧಿಕಾರಿಗಳು
- ವೀರಶೈವ ಲಿಂಗಾಯತರು ಸ್ವಯಂ ಉದ್ಯೋಗ, ಶೈಕ್ಷಣಿಕ, ಕಾರು ಖರೀದಿ ಸಾಲಕ್ಕೆ ಅರ್ಜಿ ಆಹ್ವಾನ.!
- ಕರ್ನಾಟಕ ಡಿ.ಎಸ್.ಟಿ. ಪಿ.ಹೆಚ್.ಡಿ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ
- ಉದ್ಯಮಶೀಲತಾ ಅಭಿವೃದ್ದಿ ತರಬೇತಿ ಕಾರ್ಯಕ್ರಮ.!
- ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ರಾಷ್ಟ್ರಮಟ್ಟದಲ್ಲಿ 2ನೇ ಬಹುಮಾನ- ಡಿ. ಸುಧಾಕರ್
- ಮಾರಕ ಕಾಯಿಲೆ ಡೆಂಗ್ಯೂ ಬಗ್ಗೆ ಈ ಲಕ್ಷಣಗಳು ಕಂಡುಬಂದರೆ.?