ಕರ್ನೂಲ್: ಅಗ್ನಿ ಅನಾಹುತ ಸಂಭವಿಸಿ ಮಗಳ ಮದುವೆಗಾಗಿ ಕೂಡಿಟ್ಟ ಆಭರಣ, ಹಣ ಎಲ್ಲಾ ಬೆಂಕಿಗೆ ಆಹುತಿಯಾಗಿರುವ ಘಟನೆ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
ಕಟಿಕೆ ಮೋಹನ್ ರಾವ್, ನಾಗೇಶ್ವರ್ ರಾವ್ ಅವರು ಕರ್ನೂಲ್ ಜಿಲ್ಲೆಯ ದೇವನಕೊಂಡ ಮಂಡಲದ ಕರಿವೇಮಲ್ ಗ್ರಾಮದ ನಿವಾಸಿಗಳಾಗಿದ್ದು, ಅವರು ತಮ್ಮ ಸಹೋದರಿಗೆ ವಿವಾಹ ನಿಶ್ಚಯ ಮಾಡಿದರು. ಅದಕ್ಕಾಗಿ ಅಲ್ಲಿ ಇಲ್ಲಿ ಸಾಲಸೋಲ ಮಾಡಿ 15 ಲಕ್ಷ ರೂಪಾಯಿ ನಗದು, 10 ತೊಲೆ ಚಿನ್ನ, 20 ಪೌಂಡ್ ಬೆಳ್ಳಿಯನ್ನು ತಂದು ಮನೆಯಲ್ಲಿ ಮದುವೆ ಸಮಾರಂಭಕ್ಕಾಗಿ ಇಡಲಾಗಿತ್ತು.
ಆದರೆ ಇದ್ದಕ್ಕಿದ್ದಂತೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಮನೆಯಲ್ಲಿದ್ದ ಸುಮಾರು 15 ಲಕ್ಷ ರೂಪಾಯಿ ನಗದು, ಚಿನ್ನಾಭರಣ, ಬೆಳ್ಳಿಯ ಆಭರಣಗಳು ಬೆಂಕಿಗೆ ಆಹುತಿಯಾಗಿವೆ.
ಪೊಲೀಸರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.