ಅಹಮದಾಬಾದ್: ಗುಜರಾತ್ನ ಅಹಮದಾಬಾದ್ಗೆ ತೆರಳುತ್ತಿದ್ದ ಸಬರಮತಿ ಎಕ್ಸ್ಪ್ರೆಸ್ನ ಕನಿಷ್ಠ 20 ಕೋಚ್ಗಳು (ರೈಲು ಸಂಖ್ಯೆ 19168), ಶನಿವಾರ ಮುಂಜಾನೆ ಕಾನ್ಪುರ ಬಳಿ ಹಳಿತಪ್ಪಿವೆ. ಕಾನ್ಪುರ ಮತ್ತು ಭೀಮಸೇನ್ ನಿಲ್ದಾಣಗಳ ನಡುವಿನ ಬ್ಲಾಕ್ ವಿಭಾಗದಲ್ಲಿ ಕೋಚ್ಗಳು ಹಳಿತಪ್ಪಿ ರಾತ್ರಿ 2:30 ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ವಾರಣಾಸಿಯಿಂದ ಅಹಮದಾಬಾದ್ಗೆ ಪ್ರಯಾಣಿಸುತ್ತಿದ್ದ ರೈಲು ಕಾನ್ಪುರ ಬಳಿಯ ಗೋವಿಂದ್ ಪುರಿಯ ಮುಂದೆ ಹೋಲ್ಡಿಂಗ್ ಲೈನ್ನಲ್ಲಿ ಹಳಿತಪ್ಪಿದೆ ಎಂದು ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ. ಆದರೆ ಘಟನಾ ಸ್ಥಳದಲ್ಲಿ ಯಾವುದೇ ಗಂಭೀರ ಗಾಯಗಳು ವರದಿಯಾಗಿಲ್ಲ. ಆದಾಗ್ಯೂ, ರೈಲು ಚಾಲಕ, ಇಂಜಿನ್ಗೆ ಬಂಡೆಯೊಂದು ಬಡಿದ ನಂತರ ಹಳಿತಪ್ಪಿ ಅಪಘಾತ ಸಂಭವಿಸಿರಬಹುದು ಎಂದು ಅವರು ತಿಳಿಸಿದ್ದಾರೆ.
