ಲಾಹೋರ್: ಲಾಹೋರ್ ನ ಚುಂಗ್ ಪ್ರದೇಶದಲ್ಲಿ ಭೂಗತ ಪಾತಕಿ, ಗೂಡ್ಸ್ ಟ್ರಾನ್ಸ್ ಪೋರ್ಟ್ ನೆಟ್ ವರ್ಕ್ ನ ಮಾಲೀಕ ಅಮೀರ್ ಬಾಲಾಜ್ ಟಿಪು ಎಂಬಾತನನ್ನು ಮದುವೆ ಸಮಾರಂಭದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಹತ್ಯೆಗೈದಿರುವ ಘಟನೆ ನಡೆದಿದೆ.
2010ರಲ್ಲಿ ಅಲ್ಲಾಮ ಇಕ್ಬಾಲ್ ವಿಮಾನ ನಿಲ್ದಾಣದಲ್ಲಿ ನಡೆದ ದಾಳಿಯಲ್ಲಿ ಸಾವಿಗೀಡಾಗಿದ್ದ ಆರೀಫ್ ಅಮೀರ್ ಅಲಿಯಾಸ್ ಟಿಪು ಟ್ರಂಕನ್ ವಾಲಾನ ಪುತ್ರ ಅಮೀರ್ ಬಾಲಾಜ್ ಟಿಪು ಗುಂಡಿಟಿಗೆ ಬಲಿಯಾಗಿದ್ದಾನೆ.
ಇನ್ನು ಬಾಲಾಜ್ ಅಜ್ಜ ಕೂಡಾ ಹಳೆಯ ವೈಷಮ್ಯದಲ್ಲಿ ಸಿಲುಕಿಕೊಂಡಿದ್ದು, ಅವರ ಇಡೀ ಕುಟುಂಬವೇ ಹಿಂಸಾಚಾರದಲ್ಲಿ ಶಾಮೀಲಾಗಿತ್ತು ಎಂದು ತಿಳಿದು ಬಂದಿದೆ.