ಬೇಕಾಗುವ ಸಾಮಾಗ್ರಿಗಳು ತುರಿದ ಮಾವಿನಕಾಯಿ 1 ಬಟ್ಟಲು ಈರುಳ್ಳಿ 2 ಹಸಿಮೆಣಸಿನಕಾಯಿ 4 ಬ್ಯಾಡಗಿ ಮೆಣಸಿನಕಾಯಿ 2 ತುರಿದ ತೆಂಗಿನಕಾಯಿ 3 ಟೀ ಸ್ಪೂನ್ ಕರಿಬೇವು ಸ್ವಲ್ಪ ಶುಂಠಿ 1/2 ಇಂಚು ಕಡಲೆ ಬೀಜ 3 ಟೀ ಸ್ಪೂನ್ ಕಡಲೆ ಬೇಳೆ 1 ಟೀ ಸ್ಪೂನ್ ಉದ್ದಿನ ಬೇಳೆ 1 ಟೀ ಸ್ಪೂನ್ ಅರಿಶಿಣ ಪುಡಿ 1/2 ಟೀ ಸ್ಪೂನ್ ಜೀರಿಗೆ 1 1/2 ಟೀ ಸ್ಪೂನ್ ಕೊತ್ತಂಬರಿ ಸೊಪ್ಪು ಸ್ವಲ್ಪ ಇಂಗು ಚಿಟಿಕೆ ಸಾಸಿವೆ 1/2 ಟೀ ಸ್ಪೂನ್ ಉಪ್ಪು ರುಚಿಗೆ ತಕ್ಕಷ್ಟು ಎಣ್ಣೆ ಬಿಸಿ ಬಿಸಿ ಅನ್ನಕ್ಕೆ
ಮಾಡುವ ವಿಧಾನ ಮೊದಲಿಗೆ ಅನ್ನವನ್ನು ತಯಾರಿಸಿ ಇಟ್ಟುಕೊಳ್ಳಬೇಕು. ಮಿಕ್ಸಿ ಜಾರಿಗೆ ಶುಂಠಿ, ಹಸಿಮೆಣಸಿನಕಾಯಿ, ತೆಂಗಿನ ಕಾಯಿ, ಉಪ್ಪು, ಅರ್ಧ ಚಮಚ ಜೀರಿಗೆ ಹಾಕಿ ರುಬ್ಬಿಕೊಳ್ಳಬೇಕು. ಕಡಾಯಿಗೆ ಎಣ್ಣೆ ಹಾಕಿ ಕಡಲೆ ಬೇಳೆ, ಉದ್ದಿನ ಬೇಳೆ, ಕಡಲೆ ಬೀಜ ಹಾಕಿ ಫ್ರೈ ಮಾಡಿ. ಸಾಸಿವೆ, ಬ್ಯಾಡಗಿ ಮೆಣಸಿನಕಾಯಿ, ಉಳಿದ ಜೀರಿಗೆ, ಕರಿಬೇವು, ಅರಿಶಿಣ ಪುಡಿ ಹಾಕಿ ಬಾಡಿಸಿ. ನಂತರ ರುಬ್ಬಿಕೊಂಡಿರುವ ಪೇಸ್ಟ್ ಹಾಗೂ ತೆಂಗಿನ ತುರಿ ಹಾಕಿ ಕೈಯಾಡಿಸಿ. ಬಳಿಕ ಈರುಳ್ಳಿ, ಉಪ್ಪು, ಇಂಗು ಹಾಕಿ ಕೆದಕಿ. ತುರಿದಿಟ್ಟ ಮಾವಿನಕಾಯಿ ಹಾಕಿ ಸ್ವಲ್ಪ ಹೊತ್ತು ಬಾಡಿಸಿ. ಈಗ ಮಸಾಲಾ ರೆಡಿ. ಸಿದ್ಧಗೊಂಡಿರುವ ಮಸಾಲವನ್ನು ಅನ್ನದೊಂದಿಗೆ ಕಲಸಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ರುಚಿ ನೋಡಿ.