ನವದೆಹಲಿ: ಈಶಾನ್ಯ ದೆಹಲಿಯ ಗೋಕುಲಪುರಿಯಲ್ಲಿ ಮೆಟ್ರೋ ನಿಲ್ದಾಣದ ಭಾಗವೊಂದು ಕುಸಿದು ಬಿದ್ದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಕುಸಿದು ಬೀಳುವ ವೇಳೆ ಓರ್ವ ವ್ಯಕ್ತಿ ಅವಶೇಷಗಳಡಿ ಸಿಲುಕಿದ್ದು ತಕ್ಷಣ ಆತನನ್ನು ರಕ್ಷಣೆ ಮಾಡಿ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಮೂವರಿಗೆ ಗಾಯಗಳಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ
ಇನ್ನು ಈ ಸಂಬಂಧ ಕಾನೂನು ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರೇನ್ ಹಾಗೂ ಜೆಸಿಬಿಗಳ ಸಹಾಯದಿಂದ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ.