ಮೋದಿಯವರ ಕೈ ಬಲಪಡಿಸುವುದು ನಮ್ಮೆಲ್ಲರ ಕರ್ತವ್ಯ: ಎಸ್.ಕೆ ಬಸವರಾಜನ್

 

ಚಿತ್ರದುರ್ಗ : ದೇಶದ ಭದ್ರತೆ, ಸುರಕ್ಷತೆಗಾಗಿ ಮೋದಿಯವರ ಅಗತ್ಯವಾಗಿದ್ದಾರೆ ಅವರ ಕೈ ಬಲಪಡಿಸಬೇಕಾದರೆ ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳರವರು ಗೆಲ್ಲಬೇಕಿದೆ ಇದಕ್ಕೆ ನಮ್ಮೇಲ್ಲರ ಪರಿಶ್ರಮ ಅಗತ್ಯವಾಗಿದೆ ಎಂದು ಮಾಜಿ ಶಾಸಕ ಎಸ್.ಕೆ.ಬಸವರಾಜನ್ ತಿಳಿಸಿದರು.

ಚಿತ್ರದುರ್ಗ ನಗರದಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಬರ ಮಾಡಿಕೊಂಡು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ನನ್ನ ಹಳೆಯ ಪಕ್ಷವಾಗಿದೆ ನನ್ನನ್ನು ಶಾಸಕರನ್ನಾಗಿ ಮಾಡಿದ ಪಕ್ಷವಾಗಿದೆ. ಮಹತ್ವದ ಚುನಾವಣೆಯಾಗಿದೆ ಬಜೆಪಿ ಪಕ್ಷ ಮತ್ತೋಮ್ಮ ಅಧಿಕಾರಕ್ಕೆ ಬರಬೇಕಿದೆ. ದೇಶ ಸುರಕ್ಷತೆ ಮತ್ತು ಭದ್ರತೆಯನ್ನು ಹೊಂದಬೇಕಿದೆ. ದೇಶವನ್ನು ಕಾಪಾಡುವ ಶಕ್ತಿ ಇರುವುದು ನರೆಂದ್ರ ಮೋದಿಯವರಿಗೆ ಮಾತ್ರ, ಕಳೆದ 10 ವರ್ಷದಲ್ಲಿ ಹಲವಾರು ಕಠಿಣ ಸಂದರ್ಭದಲ್ಲಿ ಉತ್ತಮವಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದರ ಮೂಲಕ ದೇಶ ಮತ್ತು ಅದರಲ್ಲಿ ಜನತೆಯನ್ನು ರಕ್ಷಿಸಿದ್ದಾರೆ. ಇದರೊಂದಿಗೆ ಬೇರೆ ದೇಶಗಳ ಯುಧ್ದಗಳನ್ನು ನಿಯಂತ್ರಿಸುವ ಶಕ್ತಿ ಯಾರಿಗಾದರೂ ಇದ್ದರೆ ಅದು ನರೇಂದ್ರ ಮೋದಿಯವರಿಗೆ ಮಾತ್ರ ಎಂದರು.

Advertisement

ಕಳೆದ 70 ವರ್ಷದಿಂದ ಕಾಂಗ್ರೆಸ್ ಪಕ್ಷ ಅಧಿಕಾರವನ್ನು ಮಾಡಿತ್ತು. ಆದರೆ 10 ವರ್ಷದಲ್ಲಿ ಅಭೀವೃದ್ದಿಯನ್ನು ಮಾಡಬೇಕೆದರೆ ಕಷ್ಟವಾಗುತ್ತದೆ. ನಮ್ಮ ದೇಶದಲ್ಲಿ ಅಭೀವೃಧ್ದಿ, ಕಾರ್ಯಕ್ರಮಗಳು ಆಗಬೇಕಿತ್ತು ಯಾಕೆಂದರೆ ನಮ್ಮದು ಬಡ ದೇಶವಾಗಿದೆ. ದೇಶವನ್ನು ಉಳಿಸುವ ಕಾರ್ಯವನ್ನು ಮಾಡಬೇಕಿದೆ. ದೇಶ ಉಳಿದರೆ ಏನೆಲ್ಲಾ ಮಾಡಬಹುದಾಗಿದೆ. ಈಗ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯನ್ನು ಮಾಡುತ್ತಿದ್ದಾರೆ. ದೇಶವನ್ನು 70 ವರ್ಷ ಆಡಳಿತ ಮಾಡಿದರೂ ಸಹಾ ಕಾಶ್ಮೀರವನ್ನ ಜೋಡಿಸುವ ಕಾರ್ಯವನ್ನು ಮಾಡಿರಲಿಲ್ಲ, ಅಲ್ಲಿ ಭಾರತದ ಬಾವುಟವನ್ನು ಹಾರಿಸದ ಪರಿಸ್ಥಿತಿ ಇತ್ತು ಈ ಸಮಯದಲ್ಲಿ ಮೋದಿಯವರು ಧೈರ್ಯದಿಂದ ಕಾಶ್ಮೀರವನ್ನು ಭಾರತಕ್ಕೆ ಮರಳಿ ನೀಡಿದ್ದಾರೆ. ಈಗ ಭಾರತವನ್ನು ಜೋಡಿಸುತ್ತೇವೆ ಎಂದು ಹೂರಟ್ಟಿದ್ದಾರೆ ಇದು ಬೂಟಾಟಿಕೆ ಚುನಾವಣೆಗಾಗಿ ಮಾಡುತ್ತಿರುವ ಕಾರ್ಯವಾಗಿದೆ. ಮೋದಿಯವರಿಗೆ ಯಾವುದೇ ಸ್ವಾರ್ಥ ಇಲ್ಲ ಕಳೆದ 10 ವರ್ಷದಲ್ಲಿ ದೇಶಕ್ಕಾಗಿ ದಿನದ 18 ಗಂಟೆಗಳ ಕಾಲ ಕೆಲಸವನ್ನು ಮಾಡುತ್ತಿದ್ದಾರೆ ಇಂತಹ ಪ್ರಧಾನ ಮಂತ್ರಿ ಮುಂದೆ ನಮಗೆ ಸಿಗುವುದಿಲ್ಲ, ತಮ್ಮ ಕೆಲಸದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಯಾವುದೇ ಹಗರಣದಲ್ಲಿ ಭಾಗಿಯಾಗದೆ ಬಿಳಿ ಹಾಳೆಯಂತೆ ಕೆಲಸವನ್ನು ದೇಶಕ್ಕಾಗಿ ಮಾಡುತ್ತಿದ್ದಾರೆ ಎಂದು ಬಸವರಾಜನ್ ತಿಳಿಸಿದರು.

Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement