ಅಬುಧಾಬಿಯಲ್ಲಿ ಇಂದು ಮೊದಲ ಹಿಂದೂ ದೇವಾಲಯದ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ.
ರಾಜಸ್ಥಾನದ ಗುಲಾಬಿ ಮರಳುಗಲ್ಲಿನಿಂದ ನಿರ್ಮಿಸಲಾದ ಅಬುಧಾಬಿಯ ಮೊದಲ ಹಿಂದೂ ದೇವಾಲಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಲಿದ್ದಾರೆ. ಬೋಚಸನ್ ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ
ಸಂಸ್ಥೆ ಸ್ವಾಮಿನಾರಾಯಣ ದೇವಾಲಯವನ್ನು ನಿರ್ಮಿಸಿದೆ.
27 ಎಕರೆ ಪ್ರದೇಶದಲ 108 ಅಡಿ ಎತ್ತರದ ಈ ದೇವಾಲಯವನ್ನು ವಾಸ್ತುಶಿಲ್ಪದ ಅದ್ಭುತವೆಂದು ಪರಿಗಣಿಸಲಾಗಿದೆ.
 
				 
         
         
         
															 
                     
                     
                     
                    


































 
    
    
        