ಚಿತ್ರದುರ್ಗ : ಮತ್ತೊಮ್ಮೆ ಮೋದಿ ಸರ್ಕಾರವನ್ನು ತರಲು ಜನ ನಿರ್ಧರಿಸಿದ್ದಾರೆ. ಮೋದಿ ಸರ್ಕಾರ ಬರುವುದು ಸೂರ್ಯ ಚಂದ್ರ ಇರುವುದಷ್ಟೇ ಸತ್ಯ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.
ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿ. ಕಾಂಗ್ರೆಸ್ ಗ್ಯಾರಂಟಿ ರೀತಿ ಅಲ್ಲ.ಬಡವರ ಶೋಷಿತರ ಜನಜೀವನ ಸುಧಾರಿಸುವ ಗ್ಯಾರಂಟಿಯಾಗಿದೆ ಎಂದು ಹೇಳಿದರು..
ಮೋದಿ ದೇಶಕ್ಕೆ ಅಂಟಿದ ಶನಿ ಎಂದು ರಮೇಶ್ ಕುಮಾರ್ ಹೇಳಿಕೆಗೆ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ರಮೇಶ್ ಕುಮಾರ್ ಅವರಿಗೆಲ್ಲ ಉತ್ತರ ಕೊಡುವ ಅಗತ್ಯವಿಲ್ಲ.ಲೋಕಸಭಾ ಚುನಾವಣೆಯ ಫಲಿತಾಂಶವೇ ಅವರಿಗೆ ಉತ್ತರ ಕೊಡುತ್ತದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಗೋವಿಂದ ಕಾರಜೋಳ ಗೆದ್ದಾಗಿದೆ. ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರ ಗೆಲ್ಲುವ ಭರವಸೆ ಇದೆ ಎಂದರು.

































