ಬೆಂಗಳೂರು: ಚಂದನವನದ ಕ್ವೀನ್, ಮೋಹಕ ತಾರೆ ಹಾಗೂ ಮಾಜಿ ಸಂಸದೆ ನಟಿ ರಮ್ಯಾ (ದಿವ್ಯ ಸ್ಪಂದನಾ) ಅವರು ಬರಲಿರುವ ನವೆಂಬರ್ ತಿಂಗಳ ಒಳಗೆ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹೌದು. 41 ವರ್ಷ ವಯಸ್ಸಿನ ರಮ್ಯಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ ಎನ್ನುವ ರೂಮರ್ಸ್ ಎಲ್ಲೆಡೆ ಹಬ್ಬಿದೆ. ಇದೇ ವರ್ಷ ಹಸೆಮಣೆ ಏರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ರಮ್ಯಾ ಅವರು ಖ್ಯಾತ ಉದ್ಯಮಿ ಚೌಧರಿ ಗಾರ್ಮೆಂಟ್ಸ್ ಮಾಲೀಕ ಪ್ರಭವ್ ಚೌಧರಿ ಎಂಬುವರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಬಿಸಿ-ಬಿಸಿಯಾಗಿ ಹರಿದಾಡುತ್ತಿದೆ. ಸದ್ಯದಲ್ಲೇ ಅವರು ಎಂಗೇಜ್ಮೆಂಟ್ ಕೂಡ ಮಾಡಿಕೊಳ್ಳಲಿದ್ದಾರೆ. ನವೆಂಬರ್ ಒಳಗಾಗಿ ಮದುವೆಯೂ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
































