ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾದ ತನ್ನ ಸ್ವಂತ ಹೃದಯವನ್ನು ಭೇಟಿ ಮಾಡುವ ಮೂಲಕ ಮಹಿಳೆ ಯೋಚಿಸಲಾಗದದನ್ನು ಮಾಡಲು ಸಾಧ್ಯವಾಯಿತು. ಕಸಿ ರೋಗಿಯಾದ ಜೆನ್ನಿಫರ್ ಸುಟ್ಟನ್ ಈಗ ತನ್ನ ಹೃದಯವನ್ನು ತೆಗೆದ ಸುಮಾರು 16 ವರ್ಷಗಳ ನಂತರ ಅದನ್ನು ನೋಡಿದ್ದಾಳೆ. ಈಗ ಲಂಡನ್‌ನ ಹಂಟೇರಿಯನ್ ಮ್ಯೂಸಿಯಂನಲ್ಲಿ ಜೆನ್ನಿಫರ್ ಹೃದಯವನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜೆನ್ನಿಫರ್ ಕೇವಲ 22 ವರ್ಷ ವಯಸ್ಸಿನವಳಾಗಿದ್ದಾಗ ಆಕೆಗೆ ನಿರ್ಬಂಧಿತ ಕಾರ್ಡಿಯೊಮಿಯೋಪತಿ ರೋಗ ಕಾಣಿಸಿಕೊಂಡಿತ್ತು. ಆ ಹೃದಯ ತೆಗೆದು ಬೇರೆ ಹೃದಯ ಕಸಿ ಮಾಡಿದರೆ ಮಾತ್ರ ಜೆನ್ನಿಫರ್ ಬದುಕುಳಿಯುತ್ತಾಳೆ ಅಂತಾ ವೈದ್ಯರು ಹೇಳಿದ್ದರು. ಅದರಂತೆ ಜೂನ್ 2007 ರಲ್ಲಿ ಹೃದಯ ಕಸಿ ಮಾಡಲಾಗಿತ್ತು. ಆಕೆಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿತ್ತು. ಈಗ, 16 ವರ್ಷಗಳ ನಂತರ, ಅವಳು ತನ್ನ ಹಳೆಯ ಹೃದಯವನ್ನು ಪ್ರದರ್ಶನದಲ್ಲಿ ನೋಡಿ ಆಶ್ಚರ್ಯಚಕಿತಳಾಗಿದ್ದಾಳೆ. ಜೆನ್ನಿಫರ್ ತನ್ನ ಹೃದಯವನ್ನು ಪ್ರದರ್ಶನಕ್ಕೆ ಒಪ್ಪಿಗೆ ನೀಡಿದ್ದಳು. ಅದೇ ರೀತಿ ಜನರು ತಮ್ಮ ಅಂಗಗಳನ್ನು ದಾನ ಮಾಡಲು ಇತರರನ್ನು ಪ್ರೋತ್ಸಾಹಿಸಬೇಕೆಂದು ಜೆನ್ನಿಫರ್ ಮನವಿ ಮಾಡಿದ್ದಾಳೆ.