ಕುವೈತ್ : ಪ್ರೀತಿ ಎಂದರೆ ಪವಿತ್ರವಾದುದು. ಮೊದಲಿನ ಕಾಲದಲ್ಲಿ ಪ್ರೀತಿಯ ಭಾವನೆ ವ್ಯಕ್ತಪಡಿಸಬೇಕು ಅಂದರೆ ಬಹಳ ದಿನಗಳೇ ತೆಗೆದುಕೊಳ್ಳುತ್ತಿತ್ತು. ಭಯ, ನಾಚಿಕೆ ಎಲ್ಲವೂ ಆವರಿಸಿಕೊಳ್ಳುತ್ತಿತ್ತು. ಮನಸ್ಸಿನಿಂದ ಪ್ರೀತಿ ಹುಟ್ಟಿಕೊಳ್ಳುತ್ತಿತ್ತು. ಆದರೆ, ಪ್ರಸ್ತುತ ದಿನದಲ್ಲಿ ಹಾಗಿಲ್ಲ ಪ್ರೀತಿಗೆ ಅರ್ಥವೇ ಇಲ್ಲದ ಹಾಗೇ ಆಗಿದೆ. ಎಲ್ಲವೂ ಮೊಬೈಲ್ ಮಯ. ಮೇಸೆಜ್‌ನಿಂದ ಎಲ್ಲಾ ಭಾವನೆಗಳು, ಮಾತು ಕಥೆ ನಡೆಯುತ್ತದೆ. ಪ್ರತಿಯೊಂದಕ್ಕೂ ಎಮೋಜಿ ಕಳಿಸುವ ಮೂಲಕ ಭಾವನೆ ವ್ಯಕ್ತಪಡಿಸುತ್ತಾರೆ. ಅದರಲ್ಲೂ ಹೆಚ್ಚಾಗಿ ಕೆಲವು ಹುಡುಗರು ಹುಡುಗಿಯರಿಗೆ ಅಸಭ್ಯ, ಎಮೋಜಿಗಳನ್ನು ಕಳಿಸಿ ಹಿಂಸೆ ನೀಡುತ್ತಿರುತ್ತಾರೆ. ಆದರೆ ಇನ್ನು ಮುಂದೆ ಹಾರ್ಟ್ ಎಮೋಜಿಗಳನ್ನು ಕಳಿಸಿ ಕಿರುಕುಳ ನೀಡಿದರೇ ಅಂಥವರು ಜೈಲ್ ಸೇರೊದು ಗ್ಯಾರಂಟಿ. ಅಷ್ಟೇ ಅಲ್ಲ ದಂಡವನ್ನೂ ಕಟ್ಟಬೇಕಾಗಿದೆ. ಹೌದು, ಇಂಥದೊಂದು ಕಾನೂನುನನ್ನು ಕುವೈತ್ ಸರ್ಕಾರ ಜಾರಿಗೊಳಿಸಿದೆ. ಕುವೈತ್ ಮತ್ತು ಸೌದಿ ಅರೇಬಿಯಾದಲ್ಲಿ ಸೋಷಿಯಲ್ ಮೀಡಿಯಾಗಳಾದ ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ಹುಡುಗಿಯರಿಗೆ ಹಾರ್ಟ್ ಸಿಂಬಲ್ ಕಳುಹಿಸಿದ್ರೆ ಅಪರಾಧವೆಂದು ಪರಿಗಣಿಸಿದೆ. ಒಂದು ವೇಳೆ ಕಾನೂನು ಮೀರಿ ಕಳಿಸಿದರೇ 2 ವರ್ಷ ಜೈಲು ಶಿಕ್ಷೆ, 2,000 ದಂಡ ವಿಧಿಸಿದೆ. ಮೆಸೇಜ್ ಕಳುಹಿಸುವವರ ವಿರುದ್ಧ ಹುಡುಗಿಯರು ದೂರು ನೀಡಿದರೆ ಅದನ್ನು ಕಿರುಕುಳದ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇದೇ ರೀತಿಯ ಪ್ರಕರಣ ಪದೇ ಪದೇ ಮರುಕಳಿಸಿದರೆ ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ, 3 ಲಕ್ಷ ಸೌದಿ ರಿಯಾಲ್‌ಗಳನ್ನು ದಂಡವಾಗಿ ಕಟ್ಟಬೇಕಾಗುತ್ತದೆ.
[vc_row][vc_column]
BREAKING NEWS
- ಕೆಎಸ್ಒಯು ಪ್ರಶ್ನೆಪತ್ರಿಕೆ ಲೀಕ್ – ಮಂಗಳೂರು ಕೇಂದ್ರದ ಸಿಬ್ಬಂದಿಯಿಂದ ಕೃತ್ಯ?
- ಉಗ್ರನಿಗೆ ಕಾನೂನಿನಿಂದ ತಪ್ಪಿಸಿಕೊಳ್ಳುವುದು ಹೇಗೆಂದು ಹೇಳಿಕೊಟ್ಟ ಜಮ್ಮು ಕಾಶ್ಮೀರದ ಡೆಪ್ಯುಟಿ ಎಸ್ಪಿ ಅರೆಸ್ಟ್
- ಕೆಲಸ ತೊರೆದ ಮಹಿಳೆ 8 ಸಾವಿರ ಕೋಟಿ ರೂ. ಮೌಲ್ಯದ ಕಂಪನಿಯ ಕಟ್ಟಿ ಬೆಳೆಸಿದರು
- ಸ್ಲೀಪ್ ಮೋಡ್ ನಿಂದ ಎಚ್ಚರವಾಗುತ್ತಾ ವಿಕ್ರಂ, ಪ್ರಗ್ಯಾನ್?
- ಭಾರತ ಕೊಟ್ಟ ಅಧ್ಯಕ್ಷೀಯ ಸೂಟ್ ನಿರಾಕರಿಸಿದ್ದ ಜಸ್ಟಿನ್ ಟ್ರುಡೋ
- ಟಿವಿ ವಾಹಿನಿಗಳಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ದೇಶನ
- ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದ 19 ವರ್ಷದ ಆಂಟಿಮ್ ಪಂಗಲ್
- ಚೈತ್ರಾ ಹೇಳಿದಂತೆ ಮಾಡಿದ್ದೀನಿ– ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡ ಅಭಿನವ ಹಾಲಶ್ರೀ..!
- ಖಾಸಗಿ ಶಾಲೆಗಳಿಗೆ ಬಿಗ್ ರಿಲೀಫ್.! ಈ ಮಾನದಂಡಗಳು ಇಲ್ಲ.!
- ಈ ಕಾರಣಕ್ಕೆ ಮೈಸೂರು ದಸರ ಸರಳ.! ಡಾ.ಹೆಚ್.ಸಿ ಮಹದೇವಪ್ಪ