ಬಿಜಾಪುರದ ವಕ್ತಿಯೊಬ್ಬ ಮುಲ್ಕಿಯಲ್ಲಿ ಮೊಬೈಲ್ ಟವರ್ ಏರಿ ಕುಳಿತ ಘಟನೆ ನಡೆದಿದೆ.
ಬಿಜಾಪುರ ಮೂಲದ ಸತೀಶ್ ಟವರ್ ಏರಿದ ವ್ಯಕ್ತಿ. ಈತ ತನ್ನ ಊರಿನ ರಸ್ತೆ ದುರಸ್ಥಿಗಾಗಿ ಮುಲ್ಕಿಯ ಕೊಳ್ನಾಡಿನ ಕೈಗಾರಿಕಾ ಪ್ರದೇಶದಲ್ಲಿರುವ ಮೊಬೈಲ್ ಟವರ್ ಏರಿ ಕುಳಿತಿದ್ದಾನೆ. ಬೆಳಿಗ್ಗೆ 10 ಗಂಟೆಗೆ ಸತಿಶ್ ಮೊಬೈಲ್ ಟವರ್ ಏರಿದ್ದು, ಸುಮಾರು ನಾಲ್ಕು ಘಂಟೆಗಳ ಕಾಲ ಟವರ್ ನಲ್ಲಿ ಕುಳಿತಿದ್ದಾನೆ, ಆದರೆ ಸಾರ್ವಜನಿಕರ ಗಮನಕ್ಕೆ ಬಂದಿರಲಿಲ್ಲ,. ಈ ನಡುವೆ ಸತೀಶ್ ನನ್ನು ಮೊಬೈಲ್ ಟವರ್ ನಲ್ಲಿ ನೋಡಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸತೀಶ್ ನ ಮನವೊಲಿಸಿ ಕೆಳಗಿಳಿಸಿದ್ದಾರೆ. ಈತ ಈ ಹಿಂದೆಯೂ ಬೆಳಗಾವಿಯಲ್ಲೂ ಮೂರು ಬಾರಿ ಟವರ್ ಏರಿದ್ದ ಎಂದು ತಿಳಿದು ಬಂದಿದೆ.


































