ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ ಖಲಿಸ್ತಾನ್ ಮತ್ತು ಸಂಘಟಿತ ಅಪರಾಧಿಗಳ ಜೊತೆ ನಂಟು ಹೊಂದಿರುವ ಆರೋಪದ ಮೇರೆಗೆ ಪಂಜಾಬ್ ಮತ್ತು ರಾಜಸ್ಥಾನದ 16 ಸ್ಥಳಗಳಿಗೆ ಮಂಗಳವಾರ ದಾಳಿ ನಡೆಸಿದೆ.
ವರದಿಯ ಪ್ರಕಾರ, ಪಂಜಾಬ್ ನ 14 ಮತ್ತು ರಾಜಸ್ಥಾನ 2 ಸ್ಥಳಗಳಿಗೆ ದಾಳಿ ನಡೆಸಿ, ದಾಳಿಯ ವೇಳೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಅರೋಪದ ಮೇಲೆ ವಿಚಾರಣೆಗಾಗಿ ಎನ್ಐಎ 6 ಮಂದಿಯನ್ನು ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.
ಇನ್ನು ಈ ದಾಳಿಯು ಭಯೋತ್ಪಾದಕರು, ದರೋಡೆಕೋರರು ಮತ್ತು ಮಾದಕವಸ್ತು ಕಳ್ಳಸಾಗಣೆದಾರ ಸಹಯೋಗದಿಂದ ಆಯೋಜಿಸಲಾದ ಉದ್ದೇಶಿತ ಹತ್ಯೆ, ಸುಲಿಗೆ ಹಾಗೂ ಇನ್ನಿತರೆ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದೆ ಎಂದು ವರದಿಯಾಗಿದೆ.