ಮಂಗಳೂರು : ಜನವರಿ 22ರ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆಯಾಗುವ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಬಂದಂತಹ ಪವಿತ್ರ. ಮಂತ್ರಾಕ್ಷತೆಯನ್ನು. ರಾಜ್ಯದ ಎಲ್ಲಾ. ಗ್ರಾಮಗಳ ಪ್ರತಿ ಮನೆಗಳಿಗೆ ವಿತರಿಸುವ. ಅಭಿಯಾನ ಇಂದಿನಿಂದ ಜನವರಿ 15ರವರೆಗೆ ನಡೆಯಲಿದೆ ಎಂದು ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ಪೆಲ್ ಹೇಳಿದ್ದಾರೆ.
ಪ್ರತಿ ಮನೆ ಮನೆಗೆ ವಿತರಿಸಲ್ಪಡುವ ಮಂತ್ರಾಕ್ಷತೆಯನ್ನು ಬಹಳ ಶ್ರದ್ಧಾ ಭಕ್ತಿಯಿಂದ ಕುಟುಂಬದ ಸದಸ್ಯರೊಂದಿಗೆ ಸ್ವೀಕರಿಸಬೇಕು. ಮಂತ್ರಾಕ್ಷತೆಯೊಂದಿಗ ಶ್ರೀ ರಾಮ ದೇವರ ಭಾವಚಿತ್ರ ಮತ್ತು ಆಮಂತ್ರಣ ಪತ್ರಿಕೆ ಪತ್ರವನ್ನು ನೀಡಲಿದ್ದಾರೆ. ಮಂತ್ರಾಕ್ಷತೆ ವಿತರಣೆ ಸಂದರ್ಭದಲ್ಲಿ ಯಾರು ಕೂಡ ಹಣವನ್ನು ನೀಡಿವಂತಿಲ್ಲ. ಯಾವುದೇ ಹಣವನ್ನು ಅಥವಾ ಯಾವುದೇ ವಸ್ತು ರೂಪದಲ್ಲಿ ನೀಡಬಾರದು. ಇದೊಂದು ಅಭಿಯಾನವಾಗಿರುವ ಕಾರಣ ಯಾವುದೇ ರೀತಿಯ ವ್ರತಾಚಾರಣೆ ,ಕಟ್ಟು ಪಾಡು ,ನಿಯಮಗಳು ಇರುವುದಿಲ್ಲ. ಮತ್ತು ಜನವರಿ 22ರಂದು ದೇವಸ್ಥಾನ ಮಠ ಮಂದಿರಗಳಲ್ಲಿ ಸಂಭ್ರಮದ ಕಾರ್ಯಕ್ರಮ ನಡೆಯಲಿದೆ. ಅಯೋದ್ಯೆಯ ರಾಮಜನ್ಮ ಭೂಮಿಯಲ್ಲಿ ಪ್ರಾಣಪ್ರತಿಷ್ಠಗೊಳ್ಳುವ ಸಂದರ್ಭದಲ್ಲಿ ರಾಜ್ಯದ ಸಾವಿರಾರು ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪೂಜೆ ಹವನ ಸತ್ಸಂಗ, ಭಜನೆ , ಮುಂತಾದ ಕಾರ್ಯಕ್ರಮ ನಡೆಯಲಿದೆ. ಪ್ರಾಣ ಪ್ರತಿಷ್ಠೆಯ ನೇರಪ್ರಸಾರ ಕೂಡ ಆಯಾಯ ಕೇಂದ್ರಗಳಲ್ಲಿ ನಡೆಯಲಿದೆ. ಆ ದಿನ ಸಂಜೆ ವೇಳೆ ಪ್ರತಿ ಮನೆಯಲ್ಲಿ ಕನಿಷ್ಠ 5 ದೀಪಗಳನ್ನು ಉರಿಸಿ ,ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಉತ್ತರದ ಕಡೆಗೆ ಮುಖ ಮಾಡಿ ಆರತಿ ಮಾಡಬೇಕು ಈ ಮೂಲಕ ಆ ದಿನವನ್ನು ಸಂಭ್ರಮಿಸಬೇಕೆಂದು ಟ್ರಸ್ಟ್ ಕರೆ ನೀಡಿದೆ ಎಂದು ಅವರು ಹೇಳಿದ್ದಾರೆ.