ಬೇಕಾಗುವ ಸಾಮಗ್ರಿಗಳು ಹೆಸರು ಬೇಳೆ – ಒಂದು ಕಪ್ ಅಕ್ಕಿ ತರಿ ಅಥವಾ ಸಣ್ಣ ಗೋಧಿ ನುಚ್ಚು – ಎರಡು ಕಪ್ ಹಸಿ ಮೆಣಸಿನ ಕಾಯಿ – 3-4 ಒಣ ಮೆಣಸಿನ ಕಾಯಿ – 2-3 ಉದ್ದಿನ ಬೇಳೆ – 1 ಚಮಚ ಕಡಲೇ ಬೇಳೆ – 1 ಚಮಚ ಸಣ್ಣಗೆ ಹೆಚ್ಚಿದ ಶುಂಠಿ ಚೂರು – ಸ್ವಲ್ಪ ಜೀರಿಗೆ – ಅರ್ಧ ಚಮಚ ಕೊತ್ತಂಬರಿ ಹಾಗೂ ಕರಿಬೇವು – ಸ್ವಲ್ಪ
ತಯಾರಿಸುವ ವಿಧಾನ ಹೆಸರು ಬೇಳೆಯನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ. ಅಕ್ಕಿ ಅಥವಾ ಗೋಧಿ ತರಿಯನ್ನು ಸ್ವಲ್ಪ ಕೆಂಪಗೆ ಹುರಿದುಕೊಳ್ಳಿ. ಎಣ್ಣೆ, ಸಾಸಿವೆ, ಇಂಗು ಕರಿಬೇವು ಹಾಕಿ ಒಗ್ಗರಣೆ ಮಾಡಿ ಇದಕ್ಕೆ ಹಸಿ ಹಾಗೂ ಒಣ ಮೆಣಸಿನಕಾಯಿ, ಶುಂಠಿ ಚೂರು, ಕಡಲೇ ಬೇಳೆ, ಉದ್ದಿನ ಬೇಳೆ ಹಾಕಿ ಕೆಂಪಗೆ ಬಾಡಿಸಿಕೊಳ್ಳಿ. 1:2 ಅನುಪಾತದಂತೆ ನೀರು ಹಾಕಿ ಹೆಸರು ಬೇಳೆ ಬೇಯಲು ಬಿಡಿ. (ಹೆಸರು ಬೇಳೆ ನುಣ್ಣಗೆ ಬೇಯಿಸಬಾರದು) 5 ನಿಮಿಷದ ನಂತರ ಅಕ್ಕಿ ಅಥವಾ ಗೋಧಿ ತರಿ ಹಾಕಿ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಬೆರೆಸಿ ಮಂದ ಉರಿಯಲ್ಲಿ ಬೇಯಲು ಬಿಡಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಡಿಸಿ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ