ಬೇಕಾಗುವ ಪದಾರ್ಥಗಳು…
- ಬೇಯಿಸಿದ ಆಲೂಗಡ್ಡೆ – 250 ಗ್ರಾಂ
- ಬೇಯಿಸಿ ಸಣ್ಣದಾಗಿ ಕಟ್ ಮಾಡಿದ ಚಿಕನ್ – 250 ಗ್ರಾಂ
- ಗರಂ ಮಸಾಲಾ – 1 ಚಮಚ
- ಹುರಿದ ಜೀರಿಗೆ ಪುಡಿ – 1 ಚಮಚ
- ಸೋಯಾ ಸಾಸ್ – 1 ಚಮಚ
- ಕಾಳು ಮೆಣಸಿನ ಪುಡಿ – 1/2 ಚಮಚ
- ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
- ಹಸಿರು ಮೆಣಸಿನಕಾಯಿ – 3-4
- ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಬಟ್ಟಲು
- ಮೊಟ್ಟೆ – 2
- ಬ್ರೆಡ್ ಕ್ರಂಬ್ಸ್ – 1 ಬಟ್ಟಲು
- ಎಣ್ಣೆ- ಹುರಿಯಲು
- ಉಪ್ಪು- ರುಚಿಗೆ ತಕ್ಕಷ್ಟು
-
- ಮೊದಲು ಮಿಕ್ಸಿಂಗ್ ಬೌಲ್ ಅನ್ನು ತೆಗೆದುಕೊಂಡು, ಬೇಯಿಸಿದ ಆಲೂಗಡ್ಡೆಯನ್ನು ಸೇರಿಸಿ ಮತ್ತು ನುಣ್ಣಹೆ ಮಾಡಿಕೊಳ್ಳಿ.
- ನುಣ್ಣಗೆ ಮಾಡಿಕೊಂಡ ಆಲೂಗಡ್ಡೆ ಬೇಯಿಸಿಕೊಂಡ ಚಿಕನ್, ಗರಂ ಮಸಾಲಾ, ಉಪ್ಪು, ಹುರಿದ ಜೀರಾ ಪುಡಿ, ಕಾಳು ಮೆಣಸಿನ ಪುಡಿ, ಹಸಿರು ಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಪುದೀನಾ, ಸೋಯಾ ಸಾಸ್ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿಕೊಳ್ಳಿ.
- ನಂತರ ಈ ಮಿಶ್ರಣವನ್ನು 10-15 ನಿಮಿಷಗಳ ಕಾಲ ಫ್ರಿಜ್‍ನಲ್ಲಿಡಿ.
- ನಂತರ ಫ್ರಿಜ್‍ನಲ್ಲಿದ್ದ ಮಿಶ್ರಣವನ್ನು ವಡೆಯ ರೀತಿ ತಟ್ಟಿ ಅದನ್ನು ಮೊಟ್ಟೆಯಲ್ಲಿ ಅದ್ದಿ, ನಂತರ ಬ್ರೆಡ್ ಕ್ರಂಬ್ಸ್ ನಲ್ಲಿ ಅದ್ದಿ, ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿದರೆ ರುಚಿಕರವಾದ ಆಲೂ ಚಿಕನ್ ಕಬಾಬ್ ಸವಿಯಲು ಸಿದ್ಧ.