ಬೇಕಾಗುವ ಪದಾರ್ಥಗಳು
- ಈರುಳ್ಳಿ (ಸಣ್ಣಗೆ-ಉದ್ದಕ್ಕೆ ಹೆಚ್ಚಿದ್ದು)- 4
- ಅಚ್ಚ ಖಾರದ ಪುಡಿ- 1 ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
- ಕಾರ್ನ್ ಫ್ಲೋರ್- 2 ಚಮಚ
- ಮೈದಾ ಹಿಟ್ಟು- 3 ಚಮಚ
- ಎಣ್ಣೆ-ಸ್ವಲ್ಪ
- ಶುಂಠಿ-ಬೆಳ್ಳುಳ್ಳಿ – ಸಣ್ಣಗೆ ಹೆಚ್ಚಿದ್ದು ಸ್ವಲ್ಪ
- ಸ್ಪ್ರಿಂಗ್ ಆನಿಯನ್- ಸ್ವಲ್ಪ (ಸಣ್ಣಗೆ ಹೆಚ್ಚಿದ್ದು
- ಸೋಯಾ ಸಾಸ್- ಅರ್ಧ ಚಮಚ
- ಚಿಲ್ಲಿ ಸಾಸ್- 1 ಚಮಚ
- ಟೊಮೆಟೋ ಸಾಸ್- 2 ಚಮಚ
- ಮಾಡುವ ವಿಧಾನ…
- ಮೊದಲಿಗೆ ಒಂದು ಪಾತ್ರೆಯಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ, ಖಾರದ ಪುಡಿ, ಉಪ್ಪು ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ 20 ನಿಮಿಷ ನೆನೆಯಲು ಬಿಡಿ.
- ನಂತರ ಇದಕ್ಕೆ ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ನೀರನ್ನು ಚುಮುಕಿಸಿಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಒಲೆಯ ಮೇಲೆ ಬಾಣಲೆಯಿಟ್ಟು, ಎಣ್ಣೆ ಹಾಕಿ. ಕಾದ ನಂತರ ಉಂಡೆಗಳನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದಿಟ್ಟುಕೊಳ್ಳಿ
- ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಇದೀಗ ಸಣ್ಣಗೆ ಕತ್ತರಿಸಿಕೊಂಡ ಶುಂಠಿ ಹಾಗೂ ಬೆಳ್ಳುಳ್ಳಿ, ಸ್ಪ್ರಿಂಗ್ ಆನಿಯನ್ ಹಾಕಿ ಕೆಂಪಗೆ ಹುರಿದುಕೊಳ್ಳಿ. ಇದಕ್ಕೆ ಸಾಸ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ. ನಂತರ ಸ್ವಲ್ಪ ನೀರಿಗೆ ಕಾರ್ನ್ ಫ್ಲೋರ್ ಮಿಶ್ರಣ ಮಾಡಿಕೊಳ್ಳಿ ಸ್ಲರಿಯನ್ನು ಸಿದ್ಧಪಡಿಸಿಕೊಳ್ಳಿ.
- ಇದೀಗ ಈ ಮಿಶ್ರಣವನ್ನು ಮಸಾಲೆಯೊಂದಿಗೆ ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ. ಮಸಾಲೆ ಗಟ್ಟಿಯಾಗುತ್ತಿದ್ದಂತೆ ಈಗಾಗಲೇ ಎಣ್ಣೆಯಲ್ಲಿ ಫ್ರೈ ಮಾಡಿಕೊಂಡ ಉಂಡೆಗಳನ್ನು ಹಾಗೂ ಸ್ವಲ್ಪ ಸ್ಪ್ರಿಂಗ್ ಆನಿಯನ್ ನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ಈರುಳ್ಳಿ ಮಂಚೂರು ಸವಿಯಲು ಸಿದ್ಧ.