ಬೇಕಾಗುವ ಪದಾರ್ಥಗಳು…
- ಕಡ್ಲೆಪುರಿ ಪುರಿ- 2 ಬಟ್ಟಲು (ಟೊಳ್ಳುಪುರಿ, ಬೆಂಗಳೂರು ಪುರಿ)
- ಚಿರೋಟಿ ರವೆ- ಅರ್ಧ ಬಟ್ಟಲು
- ಮೊಸರು- ಅರ್ಧ ಬಟ್ಟಲು
- ಕಡಲೆ ಹಿಟ್ಟು- 2 ಚಮಚ
- ಗೋಧಿ ಹಿಟ್ಟು- 2 ಚಮಚ
- ಬೆಣ್ಣೆ-ಸ್ವಲ್ಪ
- ಎಣ್ಣೆ-ಸ್ವಲ್ಪ
- ಉಪ್ಪು-ರುಚಿಗೆ ತಕ್ಕಷ್ಟು
- ಸಕ್ಕರೆ- ಅರ್ಧ ಚಮಚ
- ಮೊದಲಿಗೆ ಒಂದು ಪಾತ್ರೆಗೆ ಕಡ್ಲೆಪುರಿಯನ್ನು ಹಾಕಿ ತೊಳೆದು, ನೀರು ಹಾಕಿ 10 ನಿಮಿಷ ನೆನೆಯಲು ಬಿಡಿ. ಚಿರೋಟಿ ರವೆಗೆ 1 ಬಟ್ಟಲು ನೀರು ಹಾಕಿ ನೆನೆಯಲು ಬಿಡಿ.
- ನೆಂದ ಚಿರೋಟಿ ರವೆ ಹಾಗೂ ಕಡ್ಲೆಪುರಿಯಿಂದ ನೀರನ್ನು ಬಸಿದು, ಮಿಕ್ಸಿ ಜಾರ್’ಗೆ ಹಾಕಿಕೊಳ್ಳಿ. ಇದಕ್ಕೆ ಮೊಸರು, ಕಡಲೆಹಿಟ್ಟು, ಗೋಧಿ ಹಿಟ್ಟು, ಸಕ್ಕರೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 15-20 ನಿಮಿಷ ನೆನೆಯಲು ಬಿಡಿ.
- ಇದೀಗ ಒಲೆಯ ಮೇಲೆ ದೋಸೆ ಕಾವಲಿ ಇಟ್ಟು ಬಿಸಿ ಮಾಡಿ, ಸ್ವಲ್ಪ ನೀರು ಚಿಮುಕಿಸಿ ಟಿಶ್ಯೂ ಪೇಪರ್ ನಿಂದ ಒರೆಸಿ. ನಂತರ ದೋಸೆ ಹಿಟ್ಟನ್ನು ತೆಳ್ಳಗೆ ಹೊಯ್ದು ಅದರ ಮೇಲೆ ಬೆಣ್ಣೆ ಹಾಕಿ. ಸುತ್ತಲೂ ಒಂದು ಚಮಚ ಎಣ್ಣೆ ಹಾಕಿ ಮುಚ್ಚಳ ಮುಚ್ಚಿ ಕೆಂಪಗೆ ಬೇಯಿಸಿದರೆ, ರುಚಿಕರವಾದ ಕಡ್ಲೆಪುರಿ ಪೇಪರ್ ದೋಸೆ ಸವಿಯಲು ಸಿದ್ಧ.