ಬೇಕಾಗುವ ಪದಾರ್ಥಗಳು:
- ಬ್ರೆಡ್ ಸ್ಲೈಸ್ – 6
- ಪುದೀನಾ ಚಟ್ನಿ – ಸ್ವಲ್ಪ
- ಬೆಣ್ಣೆ- ಸ್ವಲ್ಪ
- ತುರಿದ ಚೀಸ್ – ಸ್ವಲ್ಪ
- ಸ್ಲೈಸ್ ಚೀಸ್ – 6
- ಸ್ವೀಟ್ ಕಾರ್ನ್ – ಮುಕ್ಕಾಲು ಬಟ್ಟಲು (ಬೇಯಿಸಿದ್ದು)
- ಈರುಳ್ಳಿ – ಕಾಲು ಬಟ್ಟಲು (ಸಣ್ಣಗೆ ಹೆಚ್ಚಿದ್ದು)
- ಕ್ಯಾಪ್ಸಿಕಮ್ – 2-3 ಚಮಚ (ಸಣ್ಣಗೆ ಹೆಚ್ಚಿದ್ದು)
- ಟೊಮೆಟೊ ಕೆಚಪ್ – 1-2 ಚಮಚ
- ಕಾಳು ಮೆಣಿನಪುಡಿ – ಅರ್ಧ ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಮೊದಲಿಗೆ ಒಂದು ಮಿಕ್ಸಿಂಗ್ ಬೌಲ್ನಲ್ಲಿ ಬೇಯಿಸಿ ತಣ್ಣಗಾಗಿಸಿದ ಸ್ವೀಟ್ ಕಾರ್ನ್, ಕ್ಯಾಪ್ಸಿಕಮ್ ಹಾಗೂ ಈರುಳ್ಳಿ ಹಾಕಿ ಮಿಶ್ರಣ ಮಾಡಿ.
- ಬಳಿಕ ತುರಿದ ಚೀಸ್, ಟೊಮೆಟೊ ಕೆಚಪ್, ಕಾಳು ಮೆಣಸಿನಪುಡಿ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಸ್ಟಫಿಂಗ್ ಅನ್ನು ಪಕ್ಕಕ್ಕಿಡಿ.
- ಈಗ ಬ್ರೆಡ್ ಸ್ಲೈಸ್ಗಳನ್ನು ತೆಗೆದುಕೊಂಡು, ಅದರ ಒಂದು ಬದಿಯಲ್ಲಿ ಒಂದೊಂದು ಟೀಸ್ಪೂನ್ನಷ್ಟು ಪುದೀನಾ ಚಟ್ನಿಯನ್ನು ಚೆನ್ನಾಗಿ ಹರಡಿಕೊಳ್ಳಿ.
- ಈಗ 3 ಬ್ರೆಡ್ಗಳನ್ನು ಪಕ್ಕಕ್ಕಿರಿಸಿ, ಉಳಿದ 3 ಬ್ರೆಡ್ಗಳ ಮೇಲೆ ಒಂದೊಂದೇ ಸ್ಲೈಸ್ ಚೀಸ್ ಅನ್ನು ಇರಿಸಿ.
- ಈಗ ತಯಾರಿಸಿಟ್ಟಿರುವ ಸ್ಟಫಿಂಗ್ ಮಿಶ್ರಣವನ್ನು ಒಂದೆರಡು ಟೀಸ್ಪೂನ್ಗಳಷ್ಟು ಬ್ರೆಡ್ ಸ್ಲೈಸ್ಗಳ ಮೇಲೆ ಹರಡಿ.
- ಅವುಗಳ ಮೇಲೆ ಉಳಿದ ಸ್ಲೈಸ್ ಚೀಸ್ಗಳನ್ನಿರಿಸಿ, ಪಕ್ಕಕ್ಕಿಟ್ಟಿದ್ದ ಬ್ರೆಡ್ಗಳನ್ನು ಅವುಗಳ ಮೇಲಿಸಿ.
- ಈಗ ಪ್ಯಾನ್ ಅನ್ನು ಬಿಸಿ ಮಾಡಿ ಅದರಲ್ಲಿ ಬೆಣ್ಣೆ ಹಾಕಿ, ಅವುಗಳ ಮೇಲೆ ಸ್ಯಾಂಡ್ವಿಚ್ಗಳನ್ನು ಇರಿಸಿ ಎರಡೂ ಬದಿ ರೋಸ್ಟ್ ಮಾಡಿಕೊಳ್ಳಿ.
- ಸ್ಯಾಂಡ್ವಿಚ್ಗಳು ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಅವುಗಳನ್ನು ತವಾದಿಂದ ತೆಗೆದು ಚಾಕುವಿನ ಸಹಾಯದಿಂದ ಅರ್ಧಕ್ಕೆ ಕತ್ತರಿಸಿ. ಇದೀಗ ರುಚಿಕರವಾದ ಕಾರ್ನ್ ಚೀಸ್ ಸ್ಯಾಂಡ್ವಿಚ್ ಸವಿಯಲು ಸಿದ್ಧ.